Advertisement
ಜನ್ಮದಿನದ ನಿಮಿತ್ತ ಮಾಯಕೊಂಡ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾಶಿಬಿರಕ್ಕೆ ಚಾಲನೆ ನೀಡಿದರು. ನಂತರ ವಿವೇಕಾನಂದ ವೃದ್ಧಾಶ್ರಮದ ಆಶ್ರಿತರೊಂದಿಗೆ ಉಪಾಹಾರ ಸೇವಿಸುವ
ಜತೆಗೆ ಅವರ ಸಮಸ್ಯೆ ಆಲಿಸಿದರು. ಮಾಯಕೊಂಡದಿಂದ ದಾವಣಗೆರೆ ಗೆ ಆಗಮಿಸಿ, 41ನೇ ವಾರ್ಡ್‌ನ
ಶ್ರೀರಾಮನಗರದ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟರು. ಪರಿಸರ ಸಂರಕ್ಷಣೆಗೆ ಸರ್ವರೂ ಮುಂದಾಗಬೇಕು ಎಂದರು.
ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸರ್ಕಾರಿ ಅಂಧಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ,
ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಳೆದ ಆರು ವರ್ಷದಿಂದ ಅಂಧ ಮಕ್ಕಳೊಂದಿಗೆ ಜನ್ಮದಿನ
ಆಚರಿಸಿಕೊಳ್ಳುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು. ಅಂಧ ಮಕ್ಳಳ ಶಾಲೆಗೆ ತಮ್ಮ ಅನುದಾನದಲ್ಲಿ ಸೌಲಭ್ಯ ಒದಗಿಸಲಾಗಿದೆ. ಇನ್ಮುಂದೆ ಇಲ್ಲಿಯೇ ಜನ್ಮದಿನ
ಆಚರಿಸಿಕೊಳ್ಳುವ ಜತೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು. ನಾಲ್ವರು ಮಹಿಳೆಯರು ಸೇರಿದಂತೆ
65 ಜನರು ರಕ್ತದಾನ ಮಾಡಿದರು. ಅಂಧ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಐಎಎಸ್‌ನಲ್ಲಿ ರಾಜ್ಯಕ್ಕೆ 4 ನೇ ರ್‍ಯಾಂಕ್ ಪಡೆದಿರುವ ಧ್ಯಾನ್‌ಚಂದ್‌ರನ್ನು ಸನ್ಮಾನಿಸಲಾಯಿತು. ದೊಡ್ಡಬಾತಿ ಗ್ರಾಮದ ತಪೋವನದ ಬಳಿ ಇರುವ
ವೃದ್ದಾಶ್ರಮಕ್ಕೆ ಭೇಟಿ ನೀಡಿದರು.
Related Articles
Advertisement