Advertisement

ಅಂಧರ ಚೆಸ್‌: ಬಲ್ಗೇರಿಯಾಕ್ಕೆ ಕಿಶನ್‌ ಗಂಗೊಳ್ಳಿ

01:15 PM Jul 23, 2018 | Team Udayavani |

ಕುಂದಾಪುರ: ಅಂಧರ 8ನೇ ಐಬಿಸಿಎ ವಿಶ್ವ ತಂಡ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ (ಐಬಿಸಿಎ ವರ್ಲ್ಡ್ ಟೀಮ್‌ ಚೆಸ್‌ ಚಾಂಪಿಯನ್‌ಶಿಪ್‌) ಭಾಗವಹಿಸಲು ಕಿಶನ್‌ ಗಂಗೊಳ್ಳಿ ಭಾರತೀಯ ಇತರ 4 ಆಟಗಾರರ ಜತೆ ಬಲ್ಗೇರಿಯಾಕ್ಕೆ ತೆರಳಿದ್ದಾರೆ. ಈ ಪಂದ್ಯಾವಳಿ ಜು. 31ರ ವರೆಗೆ ನಡೆಯಲಿದೆ.

Advertisement

ಕಿಶನ್‌ ಗಂಗೊಳ್ಳಿ ಭಾರತೀಯ ತಂಡದಲ್ಲಿನ ಕರ್ನಾ ಟಕದ ಏಕೈಕ ಆಟಗಾರ. ಇವರ ಜತೆಗೆ ಗುಜರಾತ್‌ನ ಅಶ್ವಿ‌ನ್‌ ಮುಕ್ವಾನಾ, ಒಡಿಶಾದ ಸೌಂದರ್ಯ ಕುಮಾರ್‌ ಪ್ರಧಾನ್‌, ಸುಬೇಂದ್‌ ಕುಮಾರ್‌ ಪಾತ್ರಾ, ಮಹಾ ರಾಷ್ಟ್ರದ ಆರ್ಯನ್‌ ಜೋಶಿ ಭಾರತವನ್ನು ಪ್ರತಿನಿಧಿಸು ತ್ತಿದ್ದಾರೆ. 2017ರಲ್ಲಿ ಭಾರತ, ಜರ್ಮನಿ, ಸ್ಪೇನ್‌, ಉಕ್ರೇನ್‌, ರಶ್ಯ, ಸರ್ಬಿಯ, ಪೋಲೆಂಡ್‌  ಮೊದಲಾದ ದೇಶಗಳ ಆಟಗಾರರು ಭಾಗವಹಿಸಿದ್ದ, 15ನೇ ಐಬಿಸಿಎ ಒಲಿಂಪಿಯಾಡ್‌ನ‌ಲ್ಲಿ ಭಾಗವಹಿಸಿದ 15 ತಂಡಗಳ ಫಿಡೆ ಶ್ರೇಯಾಂಕದ ಆಟಗಾರರು ಈ ಕೂಟದಲ್ಲಿ  ಭಾಗ ವಹಿಸಲಿದ್ದಾರೆ. ಕಿಶನ್‌ ಸಹಿತ ಈ ಐವರು ಆಟಗಾರರು ಫೆಬ್ರವರಿಯಲ್ಲಿ ಆಲ್‌ ಇಂಡಿಯಾ ಚೆಸ್‌ ಫೆಡರೇಶನ್‌ ಅಂಧರಿಗಾಗಿ ಆಯೋಜಿಸಿದ ನ್ಯಾಶನಲ್‌ ಎ ಚೆಸ್‌ ಚಾಂಪಿ ಯನ್‌ಶಿಪ್‌ನಲ್ಲಿ ಆಡಿ ಚಾಂಪಿಯನ್‌ಶಿಪ್‌ ಗಳಿಸಿದ್ದರು.
 
ಇಂಟರ್‌ನ್ಯಾಶನಲ್‌ ಬ್ರೈಲ್‌ ಚೆಸ್‌ ಅಸೋಸಿಯೇಶನ್‌ ಆಯೋಜಿಸಿದ ಬಲ್ಗೇರಿಯಾದ ಕೂಟದಲ್ಲಿ ಭಾಗವಹಿಸಲು ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಆಲ್‌ ಇಂಡಿಯಾ ಚೆಸ್‌ ಫೆಡರೇಶನ್‌ ಸಹಕಾರ ನೀಡಿವೆ. ಅಂತಾರಾಷ್ಟ್ರೀಯ ಮಾಸ್ಟರ್‌ ಸಾಗರ್‌ ಷಾ ಅವರು ಕೋಚ್‌ ಆಗಿದ್ದು, ಈ ವರ್ಷ ಭಾರತೀಯ ಅಂಧ ಚೆಸ್‌ಪಟುಗಳಿಗೆ ಮಹತ್ವದ ದಿನಗಳಾಗಿವೆ. ಗುಜರಾತ್‌ನ 3ನೇ ರ್‍ಯಾಂಕ್‌ನ ವಿದಿತ್‌ ಎಐಸಿಎಫ್ಬಿಯ ರಾಯಭಾರಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next