ಉಡುಪಿ: ಗೀತಾ ಪರಿವಾರ ನಡೆಸುತ್ತಿರುವ ಭಗವದ್ಗೀತೆ ಕಲಿಕೆಯ ಉಚಿತ ಆನ್‌ಲೈನ್ ತರಗತಿಗಳ ಹೊಸ ಬ್ಯಾಚ್ ಅ. 4ರಂದು ಆರಂಭಗೊಳ್ಳಲಿದೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ನೆಲೆಯಲ್ಲಿ ಶ್ರೀಗಳು ಝೂಮ್ ಆ್ಯಪ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಹಾರಾಷ್ಟ್ರದ ಗೋವಂದದೇವ ಗರಿ ಜೀ ಮಹಾರಾಜ್ ಅವರು ಭಗವದ್ಗೀತೆಯ ಪ್ರಚಾರಕ್ಕಾಗಿ 1989ರಲ್ಲಿ ಆರಂಭಿಸಿದ ಗೀತಾ ಪರಿವಾರ ಅಭಿಯಾನವು ಆನ್‌ಲೈನ್‌ನಲ್ಲಿ ಉಚಿತವಾಗಿ ಭಗವದ್ಗೀತೆ ಕಲಿಕೆಯ ತರಗತಿ ನಡೆಸುತ್ತಿದೆ.
2020ರ ಜೂನ್‌ನಿಂದ ಇದುವರೆಗೆ ಸುಮಾರು 2.5 ಲಕ್ಷಕ್ಕಿಂತಲೂ ಹೆಚ್ಚು ಗೀತಾಭಿಮಾನಿಗಳು ಗೀತೆಯ ಅಧ್ಯಾಯಗಳ ಶುದ್ಧ ಸಂಸ್ಕೃತ ಪಠನದ ಶಿಕ್ಷಣ ಪಡೆದಿದ್ದಾರೆ.
ಇದನ್ನೂ ಓದಿ:ಔಷಧ ಪಾರ್ಕ್‌ಗೆ ಭೂಮಿ: ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ
2021ರ ಅಕ್ಟೋಬರ್ ಬ್ಯಾಚ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಶಿಕ್ಷಾರ್ಥಿಗಳಿಗೆ ಪ್ರವೇಶ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡ ಸೇರಿದಂತೆ ಹತ್ತು ವಿವಿಧ ಭಾಷೆಗಳಲ್ಲಿ ದಿನದ ಹತ್ತು ಬೇರೆ ಬೇರೆ ಅವಧಿಗಳಲ್ಲಿ ಝೂಮ್ ಮೂಲಕ ಆನ್‌ಲೈನ್ ತರಗತಿಗಳು ನಡೆಯುತ್ತಿವೆ.
ಎಲ್ಲರಿಗೂ ಉಚಿತ ಪ್ರವೇಶವಿದೆ. ನೋಂದಣಿಗೆ ಸೆ. 30 ಕೊನೆಯ ದಿನ. ನೋಂದಣಿ ಮತ್ತು ಆರಂಭೋತ್ಸವ ವೀಕ್ಷಣೆಗೆ ವೆಬ್‌ಸೈಟ್: earngeeta.com ಅನ್ನು ಸಂಪರ್ಕಿಸಬಹುದೆಂದು ಗೀತಾ ಪರಿವಾರದ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಆಶು ಗೋಯಲ್ ತಿಳಿಸಿದ್ದಾರೆ.