Advertisement
ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಬೃಹತ್ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯಾದ್ಯಂತ 73ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 15ರಿಂದ 18 ಗಂಟೆಗಳ ಕಾಲ ನಿರಂತರ ಪಂಚರತ್ನ ಯಾತ್ರೆ ಬಗ್ಗೆ ಪ್ರಚಾರ ನಡೆಸಿದ್ದೇನೆ ಎಂದರು.
ಪಾಪದ ಹಣ ಬಳಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ತೆಗೆದ ಕೀರ್ತಿ ನಿಮ್ಮ ಕ್ಷೇತ್ರದ ಮಾಜಿ ಶಾಸಕರಿಗೆ ಸಲ್ಲಲಿದೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಸ್ವಾಭಿಮಾನಿ ನಡಿಗೆ ಕಾರ್ಯಕ್ರಮದಲ್ಲಿ ನಾನು ಕೂಡ ಸಿಎಂ ಆಗುತ್ತೇನೆಂದು ಅಂತಾ ಸಿಪಿವೈ ಗ್ರಾಮೀಣ ಭಾಗದಲ್ಲಿ ಮತ ಪಡೆಯುತ್ತಿದ್ದಾರೆ ಎಂಬ ಮಾತುಗಳನ್ನು ಕೂಡ ಕೇಳಿದ್ದೇನೆ ಎಂದರು.
Related Articles
ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಳೆದ 20 ವರ್ಷಗಳ ಕಾಲ ಶಾಸಕರಾಗಿದ್ದರು. ಅವರು ಕ್ಷೇತ್ರದಲ್ಲಿ ಒಳ್ಳೆಯ ಕಲಸ ಮಾಡಿದ್ರೆ ಈಗ ಕ್ಷೇತ್ರದ ಜನತೆಗೆ ಸೀರೆ ಹಚ್ಚುವ ಅವಶ್ಯಕತೆ ಇಲ್ಲ. ನಮ್ಮ ಕ್ಷೇತ್ರದ ಜನತೆ ಒಂದು ಸೀರೆಗಾಗಿ ತಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ. ನಮ್ಮ ಜನರು ಸ್ವಾಭಿಮಾನಿಗಳು. ಹಾಗೆಯೇ ಇಗ್ಗಲೂರಿನಲ್ಲಿ ದೇವೇಗೌಡರು ಡ್ಯಾಂ ಕಟ್ಟದಿದ್ದರೆ ಕ್ಷೇತ್ರಕ್ಕೆ ಎಲ್ಲಿ ನೀರಾವರಿ ಮಾಡಲು ಸಾಧ್ಯವಾಗುತ್ತಿತ್ತು?, ಈಗ ಕ್ಷೇತ್ರದಲ್ಲಿ ನೀರಾವರಿ ಹರಿಕಾರ, ಭಗೀರಥ ಅಂತಾ ಎಂದು ಬರೆದುಕೊಂಡಿದ್ದಾರೆ. ಈಗ ಸತ್ತೆಗಾಲ ಯೋಜನೆ ರೂಪಿಸಿ ಈಡೀ ಜಿಲ್ಲೆಗೆ ಶಾಶ್ವತವಾಗಿ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ ಎಂದು ಸಿಪಿವೈ ವಿರುದ್ದ ಎಚ್‌ಡಿಕೆ ವಾಗ್ಧಾಳಿ ನಡೆಸಿದ್ದಾರೆ.
Advertisement
ಇವರಿಗೆ ನಿಜವಾದ ಕಾಳಜಿ ಇದ್ದಿದ್ದರೆ ಕೊರೊನಾ ಹಾಗೂ ರಾಸುಗಳಿಗೆ ಕಾಲು ಬಾಯಿ ಜ್ವರ ಬಂದು ಹಸುಗಳು ಸತ್ತಾಗ ನೀನು ಎಲ್ಲಿದ್ದಪ್ಪಾ?, ಸಂಕಷ್ಟದಲ್ಲಿದಾಗ ಕಾಣದ ಯೋಗೇಶ್ವರ್ ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾನೆ. ಇಂತಹ ಪೊಳ್ಳು ಮಾತಿಗೆ ಜನ ಮಣೆ ಹಾಕುವುದಿಲ್ಲ ಎಂದರು.
ಕಾರ್ಯಕ್ರಮಕ್ಕೆ ತೊಂದರೆ ಕೊಟ್ಟಿದ್ದೀರಿ, ನಿಮ್ಮ ಕಳ್ಳಾಟ ಇನ್ನು 2 ತಿಂಗಳಷ್ಟೆ
ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ ನಡೆಸುವುದಕ್ಕೆ ಸಹಕಾರ ಇಲಾಖೆ ಅಧಿಕಾರಿಗಳು ತೀರಾ ತೊಂದರೆ ಕೊಟ್ಟಿದ್ದು, ಸಹಕಾರ ಕ್ಷೇತ್ರದ ಅಧಿಕಾರಿಗಳಾದ ಎಆರ್ ಹಾಗೂ ಡಿಆರ್‌ಗಳು ನೋಡಿದ್ದೇನೆ. ಇಲಾಖೆಯಲ್ಲಿ 50 ಲಕ್ಷ ಹಾಗೂ ಒಂದು ಕೋಟಿ ಲೂಟಿ ಮಾಡಿದವರಿಗೆ ಹೇಳುವವರು ಕೇಳುವವರು ಇಲ್ಲ. ಸಹಕಾರ ಇಲಾಖೆಯಲ್ಲಿ ಸರಿಯಾದ ಕಾನೂನು ಇಲ್ಲ. ನಿಮ್ಮ ಕಳ್ಳಾಟ ಇನ್ನು 2 ತಿಂಗಳು ಅಷ್ಟೆ. ನಾನು ಎಂದಿಗೂ ಅಧಿಕಾರದಲ್ಲಿ ಇದ್ದಾಗ ಅಧಿಕಾರಿಗಳಿಗೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಕೆಲ ಅಧಿಕಾರಿಗಳು ಬೆಳಗ್ಗೆ ನಮ್ಮ ಮನೆಗೆ ಬರುತ್ತಾರೆ ರಾತ್ರಿಯಾದ್ರೆ ಬೇರೆಯವರಿಗೆ ದುಡ್ಡು ಕೊಟ್ಟುತ್ತಾರೆ. ಅದೆಲ್ಲವು ಕೂಡ ಗೊತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಎಚಿxಕೆ ಗರಂ ಆದರು. ಇದೇ ನನ್ನ ಕಡೆ ಚುನಾವಣೆ
ಚನ್ನಪಟ್ಟಣ ಕ್ಷೇತ್ರ ಬಿಟ್ಟು ನಾನು ಬೇರೆಡೆ ಸ್ಪರ್ಧೆ ಮಾಡೋಲ್ಲ. ಇದೇ ನನ್ನ ಕೊನೆ ಚುನಾವಣೆಯಾಗಿದೆ. 2028ಕ್ಕೆ ಈ ಕ್ಷೇತ್ರದಿಂದ ಕಾರ್ಯಕರ್ತರನ್ನು ನೀವೇ ಹುಡುಕಿಕೊಳ್ಳಿರಿ. ಮುಂದೆ ರಾಜಕೀಯ ಯಾವ ಹಂತಕ್ಕೆ ಬರಲಿದೆ ಕಾದು ನೋಡೋಣ. ನಾನು ಹಾಸನದಲ್ಲಿ ಹುಟ್ಟಿರಬಹುದು. ಆದರೆ, ರಾಮನಗರ ಕ್ಷೇತ್ರ ನನಗೆ ರಾಜಕೀಯವಾಗಿ ಜನ್ಮ ನೀಡಿದೆ ಎಂದು ಸ್ಮರಿಸಿದರು.