Advertisement
ಅವರು ಜ. 11ರಂದು ಬೆಳ್ಳಿಬೆಟ್ಟು “ಸುಮಿತ್ರಾ’ದಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್ ಹಾಗೂ ಅನುರಾಧಾ ಪ್ರದೀಪ್ ಕುಟುಂಬಸ್ಥರು, ಸಹೋದರ, ಸಹೋದರಿಯರ ನೇತೃತ್ವದಲ್ಲಿ ನಡೆದಿದ್ದ ಅದಮಾರು ಶ್ರೀ ನರಸಿಂಹ ತೀರ್ಥ ಮೂಲ ಸಂಸ್ಥಾನದ ಶ್ರೀ ಕಾಳೀಯಮರ್ದನ ಶ್ರೀ ಕೃಷ್ಣನ ಮಹಾಪೂಜೆಯನ್ನು ನೆರವೇರಿಸಿ ನೆರೆದವರೆಲ್ಲರನ್ನೂ ಆಶೀರ್ವದಿಸುತ್ತಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಆಶೀರ್ವದಿಸಿದ ಶ್ರೀ ಅದಮಾರು ಕಿರಿಯ ಮಠಾಧೀಶ, ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಜ್ಞಾನಮಯನಾಗಿ ಅನಂತ ರೂಪವನ್ನು ಹೊಂದಿರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ತುಡಿತ ಸದಾ ನಮ್ಮಲ್ಲಿರಲಿ. ಈ ಪೂಜೆಗಳು, ಶ್ರೀಪಾದ ಪೂಜೆಗಳು ಭಗವಂತನನ್ನು ಒಲಿಸಿಕೊಳ್ಳುವ ಕ್ರಮಗಳಾಗಿವೆ. ಅರ್ಚನೆ, ಆರಾಧನೆ, ಅಧ್ಯಯನಗಳೂ ಭಗವಂತನನ್ನು ಒಲಿಸಿಕೊಳ್ಳುವ ಇತರ ಮಾರ್ಗಗಳಾಗಿದ್ದು ಇದು ನಮ್ಮೆಲ್ಲರಲ್ಲಿ ಹಚ್ಚುತ್ತಿರಲಿ ಎಂದರು. ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್, ಅನುರಾಧಾ ಪ್ರದೀಪ್, ಸಹೋದರ, ಸಹೋದರಿಯರು, ಮಾಜಿ ಸಂಸದ ಜಯಪ್ರಕಾಶ್‌ಹೆಗ್ಡೆ, ಎಂ.ಆರ್.ಹೆಗ್ಡೆ, ಕಳತ್ತೂರು ನಾಗೇಶ್ ಭಟ್, ಶಿಬರೂರು ವೇ | ಮೂ | ವಾಸುದೇವ ಆಚಾರ್ಯ, ವೆಂಕಟರಮಣ ಮುಚ್ಚಿಂತಾಯ, ನಾರಾಯಣ ಶಬರಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪೂರ್ವಾಹ್ನ ಕೇಂಜ ವೇ| ಮೂ| ಶ್ರೀಧರ ತಂತ್ರಿ ಮತ್ತು ಬಳಗದವರಿಂದ ಆದ್ಯ ಗಣ ಯಾಗ, ಚಂಡಿಕಾ ಹೋಮಾದಿಗಳು ನಡೆದವು. ಬೆಳ್ಳಿಬೆಟ್ಟು ಸುಮಿತ್ರಾಕ್ಕೆ ಆಗಮಿಸಿದ ಶ್ರೀಪಾದದ್ವಯರನ್ನು ಶೈಭವದ ಮೆರವಣಿಗೆಯಲ್ಲಿ “ಸುಮಿತ್ರಾ’ಕ್ಕೆ ಬರಮಾಡಿಕೊಳ್ಳಲಾಯಿತು.