Advertisement

ಅಫ್ಘಾನಿಸ್ಥಾನದಲ್ಲಿ ಮತ್ತಷ್ಟು ಸ್ಫೋಟ

12:32 AM Aug 20, 2019 | mahesh |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಶನಿವಾರ ರಾತ್ರಿ ಮದುವೆ ಸಮಾರಂಭದ ಮೇಲೆ ನಡೆದ ದಾಳಿಯ ಅನಂತರದಲ್ಲಿ ಸೋಮವಾರ ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆದಿದೆ. ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ದಿನವೇ ನಡೆದ ಹತ್ತಕ್ಕೂ ಹೆಚ್ಚು ಸ್ಫೋಟಗಳಲ್ಲಿ 34ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭಾಗದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಮತ್ತು ತಾಲಿಬಾನ್‌ ಉಗ್ರರ ಪ್ರಭಾವವಿದ್ದು, ಇವರೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಶನಿವಾರದ ಕಾಬೂಲ್‌ ಸ್ಫೋಟದಲ್ಲಿ 63 ಜನರು ಸಾವನ್ನಪ್ಪಿದ್ದರು. ಇದರ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿತ್ತು.

Advertisement

ಜಲಾಲಾಬಾದ್‌ನ ಮಾರ್ಕೆಟ್‌ನಲ್ಲಿ ಬಾಂಬ್‌ಗಳನ್ನು ಇಡಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾರುಕಟ್ಟೆಗೆ ಜನರು ಆಗಮಿಸುತ್ತಿದ್ದಂತೆಯೇ ಬಾಂಬ್‌ ಸ್ಫೋಟಗೊಂಡಿದೆ. ಮುಂದಿನ ವರ್ಷದೊಳಗೆ ಅಫ್ಘಾನಿಸ್ಥಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿ ಕೊಳ್ಳಲು ಮಾತುಕತೆ ಅಂತಿಮಗೊಳ್ಳುತ್ತಿದ್ದಂತೆಯೇ ಈ ಸ್ಫೋಟ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಮತ್ತೆ ಇಡೀ ದೇಶ ತಾಲಿಬಾನ್‌, ಐಸಿಸ್‌ ಕಪಿಮುಷ್ಟಿಗೆ ಸಿಲುಕುವ ಆತಂಕವೂ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next