ಮುಂಬಯಿ: ಮುಂಬಯಿಯ ಹಡಗು ದುರಸ್ತಿ ಕೇಂದ್ರದಲ್ಲಿದ್ದ ಐಎಸ್‌ಎಸ್ ರಣವೀರ್‌ನಲ್ಲಿ ಸ್ಫೋಟ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ನೌಕಾಪಡೆಯ ಮೂವರು ಯೋಧರು ಅಸುನೀಗಿದ್ದಾರೆ.
ಈ ದುರಂತದಲ್ಲಿ 11 ಮಂದಿ ಗಾಯ ಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಡಗಿನಲ್ಲಿದ್ದ ಶಸ್ತ್ರಾಸ್ತ್ರ ಅಥವಾ ಮದ್ದು ಗುಂಡಿನಿಂದಾಗಿ ಈ ಸ್ಫೋಟ ಸಂಭವಿಸಿಲ್ಲ ಎನ್ನಲಾಗಿದೆ. ಸ್ಫೋಟದಿಂದಾಗಿ ನೌಕೆಗೆ ಯಾವುದೇ ಹಾನಿಯಾಗಿಲ್ಲ. ನೌಕೆಯಲ್ಲಿದ್ದ ಯೋಧರು ಮತ್ತು ಇತರ ಸಿಬ್ಬಂದಿ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ರಕ್ಷಣ ಸಚಿವಾಲಯ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಬಜೆಟ್ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ
ಐಎನ್‌ಎಸ್ ರಣವೀರ್ ಅನ್ನು 2021ರ ನವೆಂಬರ್‌ನಲ್ಲಿ ನೌಕಾ ಪಡೆಯ ಪೂರ್ವ ಕಮಾಂಡ್ ವತಿಯಿಂದ ಕರಾವಳಿ ಪ್ರದೇಶದಲ್ಲಿನ ಕಾರ್ಯಾಚರಣೆ ಗಾಗಿ ನಿಯೋಜನೆಗೊಳಿಸಲಾಗಿತ್ತು. 2013ರ ಸಿಂಧೂ ರಕ್ಷಕ್ ಸಬ್‌ಮರೀನ್‌ನಲ್ಲಿ ಸ್ಫೋಟ ಸಂಭವಿಸಿ ಅದು ಮುಳುಗಿತ್ತು.