Advertisement

ಅಫ್ಘಾನ್ :ಮಸೀದಿ ಗುರಿಯಾಗಿರಿಸಿ ಮತ್ತೆ ಬಾಂಬ್ ಸ್ಫೋಟ

03:38 PM Nov 12, 2021 | Team Udayavani |

ಕಾಬೂಲ್ : ಪೂರ್ವ ಅಫ್ಘಾನಿಸ್ಥಾನದ ನಂಗರ್‌ಹಾರ್ ಪ್ರಾಂತ್ಯದ ಸ್ಪಿನ್ ಘರ್ ಪ್ರದೇಶದಲ್ಲಿ ಮಸೀದಿಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಸ್ಥಳೀಯ ಮೌಲ್ವಿ ಸೇರಿದಂತೆ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಶುಕ್ರವಾರದ ಪ್ರಾರ್ಥನೆಯ ವೇಳೆ ಮಧ್ಯಾಹ್ನ 1:30ರ ಸುಮಾರಿಗೆ ಮಸೀದಿಯ ಒಳಭಾಗದಲ್ಲಿದ್ದ ಸ್ಫೋಟಕಗಳು ಸ್ಫೋಟಗೊಂಡಿವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇದುವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next