Advertisement

ಕಪ್ಪುಬಾವುಟ ಪ್ರದರ್ಶಿಸಿದಾತ ಈಗ ಸಲಹೆಗಾರ!

01:23 PM Apr 01, 2019 | Team Udayavani |

ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧವೇ ಕಪ್ಪುಬಾವುಟ ಪ್ರದರ್ಶಿಸಿದ್ದ ವ್ಯಕ್ತಿ ಈಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೊಸ ರಾಜಕೀಯ ಸಲಹೆಗಾರ ಎಂದರೆ ನಂಬುತ್ತೀರಾ?

Advertisement

ನಂಬಲೇಬೇಕು. ಜವಾಹರಲಾಲ್‌ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ಸಂದೀಪ್‌ ಸಿಂಗ್‌ ಅವರೇ ಈಗ ರಾಹುಲ್‌ಗೆ ಭಾಷಣಗಳನ್ನು ಬರೆದುಕೊಡುವವರು. ಅಷ್ಟೇ ಅಲ್ಲ, ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಸಲಹೆಗಳನ್ನೂ ಅವರು ನೀಡುತ್ತಿದ್ದಾರೆ. ಅವರನ್ನು ಅಧಿಕೃತವಾಗಿ ಸಲಹೆಗಾರರೆಂದು ಘೋಷಣೆ ಮಾಡಿಲ್ಲವಾದರೂ, ರಾಹುಲ್‌ ಹಾಗೂ ಪ್ರಿಯಾಂಕಾ ವಾದ್ರಾರಿಗೆ ಆಪ್ತರಾಗಿ ಸಂದೀಪ್‌ ಸಿಂಗ್‌ ಕೆಲಸ ಮಾಡುತ್ತಿದ್ದಾರೆ.

2005ರಲ್ಲಿ ಸಂದೀಪ್‌ ಜೆಎನ್‌ಯು ವಿದ್ಯಾರ್ಥಿಯಾಗಿದ್ದಾಗ ಅಂದಿನ ಪ್ರಧಾನಿ ಮನ ಮೋಹನ್‌ ಸಿಂಗ್‌ಗೆ ಕಪ್ಪುಬಾವುಟ ಪ್ರದರ್ಶಿಸಿದ್ದರು. ಆಗ ಅವರು ಕಟ್ಟರ್‌ ಎಡ ಪಂಥೀಯ  ವಾದಿಯಾಗಿದ್ದರು. ಆದರೆ, ಜೆಎನ್‌ಯು ತೊರೆದ ಬಳಿಕ ಎಡ ರಾಜಕೀಯದಿಂದ ದೂರವುಳಿದ ಸಿಂಗ್‌, ಅಣ್ಣಾಹಜಾರೆ ಅವರ ಲೋಕಪಾಲ ಚಳವಳಿಯಲ್ಲಿ ಸಕ್ರಿಯರಾದರು. ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಸಂದೀಪ್‌, ರಾಹುಲ್‌ಗೆ ಕಾರ್ಯತಂತ್ರ ಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂದ ಹಾಗೆ, ಕಾಂಗ್ರೆಸ್‌ಗೆ ಬಂದೊಡನೆ ಅವರು ಮಾಜಿ ಪ್ರಧಾನಿ ಸಿಂಗ್‌ಗೆ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next