Advertisement
ಶುಕ್ರವಾರ ಮುಂಜಾನೆ ಆದೂರು ಅಬಕಾರಿ ಚೆಕ್‌ಪೋಸ್ಟ್ ಪರಿಸರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಗಳೂರಿನಿಂದ ಕಾಸರಗೋಡಿಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಣ ಪತ್ತೆಯಾಯಿತು. ಈ ಸಂಬಂಧ ಮಹಾರಾಷ್ಟ್ರದ ಸತಾರ ಜಿಲ್ಲೆಯ ದೇವಾಪುರ ನಿವಾಸಿ ಭರತ್ ಅವರ ಪುತ್ರ ಮಯೂರ್ ಭರತ್ ದೇಶ್‌ಮುಖ್(23)ನನ್ನು ಬಂಧಿಸಿದ್ದಾರೆ.
ಕರ್ನಾಟಕದಿಂದ ಬಸ್‌ಗಳಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೇ 30ರ ರಾತ್ರಿಯಿಂದಲೇ ಆದೂರು ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ಆರಂಭಿಸಿದ್ದರು. ಆಗ ಕಾಳಧನ ಪತ್ತೆಯಾಯಿತು. ಈ ರೀತಿ ಹಣವನ್ನು ಕಾಸರಗೋಡಿಗೆ ಸಾಗಿಸಿದರೆ ತಿಂಗಳಿಗೆ 10 ಸಾ.ರೂ. ಹಣ ಮತ್ತು ಇತರ ಖರ್ಚುಗಳನ್ನು ನೀಡುತ್ತಿದ್ದುದಾಗಿ ಬಂಧಿತ ದೇಶ್‌ಮುಖ್ ತಿಳಿಸಿದ್ದಾನೆ.