Advertisement

ಯುವಕನ ನಗ್ನ ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬ್ಲಾಕ್‌ ಮೇಲ್ ಮಾಡಿದಳು ಯುವತಿ!

05:16 PM Jul 19, 2020 | sudhir |

ಬೆಂಗಳೂರು: ಯುವತಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಬೆತ್ತಲೆ ನೋಡಬೇಕೆಂದು ಹೇಳಿ ವಿಡಿಯೋ ಕಾಲ್‌ ಮಾಡಿಸಿಕೊಂಡು, ಅನಂತರ ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡಿ 22 ಸಾವಿರ ರೂ.ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ಯುವಕ ವೈಟ್‌ ಫೀಲ್ಡ್‌ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Advertisement

ವೈಟ್‌ ಫೀಲ್ಡ್‌ ನ ದೊಡ್ಡನೆಕ್ಕುಂದಿ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವಕ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಏಕಾಂತವಾಗಿರುವಾಗ ಮಹಿಳೆ ಜತೆ ಕಾಲ ಕಳೆಯಲು ಓಕೆ ಕೂಪಿಡ್‌ ಆ್ಯಪ್‌ ನಲ್ಲಿ ಹುಡುಕಾಡಿದ್ದ. ಆ್ಯಪ್‌ ಮೂಲಕ ಯುವತಿಯನ್ನು ಸಂಪರ್ಕಿಸಿದ್ದ. ಕಾಲ ಕ್ರಮೇಣ ಇಬ್ಬರು ಪರಸ್ಪರ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು.

2-3 ದಿನಗಳವರೆಗೆ ವಾಟ್ಸ್‌ ಆ್ಯಪ್‌ ನಲ್ಲಿ ಚಾಟಿಂಗ್‌ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಭಾವನೆಯನ್ನು ಮಹಿಳೆಯ ಮುಂದೆ ಹೇಳಿಕೊಂಡಿದ್ದ. ಬಳಿಕ ಆಕೆಯ ಜತೆ ವಾಟ್ಸ್‌ ಆ್ಯಪ್‌ ನಲ್ಲಿ ನಗ್ನವಾಗಿ ವಿಡಿಯೋ ಸಂಭಾಷಣೆ ನಡೆಸಿದ್ದ. ಅದೇ ವೇಳೆ ಆಕೆ, ಯುವಕನ ಅರಿವಿಗೆ ಬಾರದಂತೆ ವಿಡಿಯೋ ಸಂಭಾಷಣೆಯ ದೃಶ್ಯವನ್ನು ರೆಕಾರ್ಡ್‌ ಮಾಡಿಕೊಂಡಿದ್ದಾಳೆ. ರೆಕಾರ್ಡ್‌ ಮಾಡಿಕೊಂಡಿರುವ ಖಾಸಗಿ ದೃಶ್ಯಗಳನ್ನು ಯುಟ್ಯೂಬ್‌ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್‌ಮೇಲ್‌ ಮಾಡಿದ್ದಾಳೆ.

ಮಾನಕ್ಕೆ ಹೆದರಿದ ಯುವಕ 22 ಸಾವಿರ ರೂ. ಅನ್ನು ಆಕೆ ಖಾತೆಗೆ ಸಂದಾಯ ಮಾಡಿದ್ದಾನೆ. ಅನಂತರವೂ ಆಕೆ ಹಣಕ್ಕೆ ಬೇಡಿಕೆ ಇಟ್ಟಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next