ನವದೆಹಲಿ: ಹಿಂದೆಂದೂ ಕಂಡಿರದಂಥ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಬ್ರಹ್ಮಾಂಡದ ಅತ್ಯಂತ ಪ್ರಕಾಶಮಾನವಾದ ಕಪ್ಪುಕುಳಿಯೊಂದನ್ನು ಖಗೋಳವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಈ ಕಪ್ಪುಕುಳಿಯು ಸೂರ್ಯನಿಗಿಂತ ಅಂದಾಜು 1,700 ಕೋಟಿ ಪಟ್ಟು ದ್ರವ್ಯರಾಶಿಯನ್ನು ಹೊಂದಿದೆ ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ(ಎಎನ್‌ಯು) ಸಂಶೋಧಕರು ಹೇಳಿದ್ದಾರೆ. ಕಪ್ಪುಕುಳಿ ಬೆಳೆಯುತ್ತಿರುವ ಅಗಾಧ ವೇಗವನ್ನು ನೋಡಿದರೆ, ಅದು ಭಾರೀ ಪ್ರಮಾಣದಲ್ಲಿ ಬೆಳಕು ಮತ್ತು ಉಷ್ಣತೆಯನ್ನು ಬಿಡುಗಡೆ ಮಾಡುತ್ತಿರುವುದನ್ನು ಖಾತ್ರಿ ಪಡಿಸುತ್ತದೆ. ಇದು ಸೂರ್ಯನಿಗಿಂತ 500 ಲಕ್ಷ ಕೋಟಿ ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ ಎಂದಿದ್ದಾರೆ.
ಕಪ್ಪುಕುಳಿ ಎಂದರೇನು?
ಕಪ್ಪುಕುಳಿ ಎನ್ನುವುದು ಬಾಹ್ಯಾಕಾಶ ಒಂದು ವಿಶಿಷ್ಟ ಪ್ರದೇಶವಾಗಿದ್ದು, ಇಲ್ಲಿ ಗುರುತ್ವ ಬಲವು ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ, ಬೆಳಕು ಕೂಡ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಪ್ಪುರಂಧ್ರ ಅಗೋಚರವಾಗಿರುವ ಕಾರಣ, ಅದು ಜನರ ಕಣ್ಣಿಗೆ ಕಾಣಿಸುವುದಿಲ್ಲ. ಅದು ತನ್ನ ಬೆಳಕನ್ನು ತಾನೇ ನುಂಗುತ್ತಿರುವ ಅಗಾಧಶಕ್ತಿಯ ತಾಣ.
ಇದನ್ನೂ ಓದಿ: Judge: ಅಕ್ರಮ ಮರಳು ಮಾಫಿಯಾಗೆ ಬಲಿಯಾದ ಅಧಿಕಾರಿಯ ಮಗ ಈಗ ಜಡ್ಜ್!