Advertisement

ಕಪ್ಪು ತಲೆ ಸಮುದ್ರ ಬಾತು

04:26 PM Jul 08, 2017 | |

ಇದು ಲಾರಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಈ ಪಂಗಡದಲ್ಲಿ ಗಲ್‌ ಅಂದರೆ ಸಮುದ್ರ ಬಾತು, ಸಮುದ್ರ ಪಕ್ಷಿಗಳು ಸೇರಿಕೊಂಡಿದೆ. BLACK HEADED GULL (Larus ridibunds)   M -Brown headed Gul   ಈ ಹಕ್ಕಿಗಳಲ್ಲಿ ಸ್ಥಳೀಯ ಮತ್ತು ವಲಸೆ ಎನ್ನುವ ಎರಡೂ ವಿಧಗಳಿವೆ. ಸಾಮಾನ್ಯವಾಗಿ ಸಮುದ್ರ ತೀರದಲ್ಲೆ ವಾಸಿಸುತ್ತವೆ. 

Advertisement

 ಕೆಲವೊಮ್ಮೆ ಉತ್ತರ ಭಾರತದಲ್ಲಿ ಮರಿಮಾಡುವ ಸಮಯದಲ್ಲಿ ಲಡಾಕಿನ ದೊಡ್ಡ ದೊಡ್ಡ ಸರೋವರಗಳ ಹತ್ತಿರ ಇರುತ್ತವೆ. ಚಿಕ್ಕ ಕಪ್ಪುತಲೆ ಸಮುದ್ರ ಬಾತು, ಹಳದಿಕಾಲಿನ ಸಮುದ್ರ ಬಾತು, ಕಂದು ಬಣ್ಣದ ತಲೆಯ ಸಮುದ್ರ ಬಾತು, ಮಸುಕು ಬಣ್ಣದ ಸಮುದ್ರ ಬಾತು, ಇವುಗಳ ಜೊತೆಯಲ್ಲಿಯೇ ಇರುವ ಮೀನು ಗುಟುರ ಎಂದು ಕರೆಯುವ ಜಾಲ ಪಾದ ಇರುವ ಹಕ್ಕಿಗಳೂ ಸಾಮಾನ್ಯವಾಗಿ ಒಟ್ಟಾಗಿ ಸಮುದ್ರ ತೀರದಲ್ಲಿರುತ್ತದೆ. ಅಲ್ಲಿರುವ ಮೀನು, ಮೃದ್ವಂಗಿ, ನಕ್ಷತ್ರ ಮೀನು, ಸಮುದ್ರ ತಡಿಯಲ್ಲಿ ಇರುವ ಕಲ್ಲು ಮಾಸಂಸ ಬೆಳೆಯುವ ಜಾಗ ಇವುಗಳಿಗೆ ಪ್ರಿಯ.

 ಕಪ್ಪುತಲೆಯ ಸಮುದ್ರ ಬಾತುವಿನ ಚುಂಚು ತುದಿಯಲ್ಲಿ ಸ್ವಲ್ಪ ಬಾಗಿದ ಕೊಕ್ಕೆ ಇದೆ. ಇದರ ಸಹಾಯದಿಂದ ಚಿಪ್ಪುಗಳನ್ನು ಕಲ್ಲಿನಿಂದ ಎಬ್ಬಿಸಿ ಅದನ್ನು ಕಾಲು ಹಾಗೂ ಚುಂಚಿನ ಸಹಾಯದಿಂದ ಒಡೆದು, ಅದರ ಒಳಗಿರುವ ಮಾಂಸ ತಿನ್ನುತ್ತದೆ. ಸಮುದ್ರ ತೀರದಲ್ಲಿ ಅಲೆಗಳಲ್ಲಿ ತೇಲಿಬರುವ ಚಿಕ್ಕ ಚಿಕ್ಕ ಹುಳಗಳನ್ನು ತೆರೆಯ ಗುಂಟ ಅನುಸರಿಸಿ, ಓಡುತ್ತಾ, ಇಲ್ಲವೇ ಕೆಲವೊಮ್ಮ ಸ್ವಲ್ಪ ದೂರ ಹಾರಿ, ತೆರೆ ಹಿಂದೆ ಸರಿದಾಗ ಮರಳುಗಳಲ್ಲಿ ಇರುವ ಚಿಕ್ಕ ಸಮುದ್ರದ ಏಡಿ, ಮೃದ್ವಂಗಿ, ಚಿಕ್ಕ ಸಮುದ್ರದ ಹುಳು, ಚಿಕ್ಕ  ಚಿಪ್ಪು ಮಾಂಸ ತಿನ್ನುತ್ತದೆ. ಕಪ್ಪುತಲೆ ಸಮುದ್ರ ಬಾತು ಸುಮಾರು 33 ರಿಂದ 43 ಸೆಂ.ಮೀ ಇರುತ್ತದೆ. ಆದರೆ ಕಂದು ತಲೆ ಸಮುದ್ರ ಬಾತು ಇದಕ್ಕಿಂತ ಆಕಾರದಲ್ಲಿ ದೊಡ್ಡದು. ಕಂದು ಬಣ್ಣ ಕುತ್ತಿಗೆಯ ಹಿಂದೆ ನೇರವಾಗಿದೆ. ಆದರೆ ಕಪ್ಪುತಲೆ ಬಾತುವಿಗೆ ಕುತ್ತಿಗೆ ಹಿಂಭಾಗದಲ್ಲಿ ಬಣ್ಣ ವರ್ತುಲಾಕಾರವಾಗಿರುತ್ತದೆ. ಚಳಿಗಾಲದಲ್ಲಿ ಕಪ್ಪು ಬಣ್ಣ ಮಾಯವಾಗಿ ಕಣ್ಣಿನ ಹಿಂದೆ ಮಾಸಲು ಮಚ್ಚೆಯಂತೆ ಕಾಣುತ್ತದೆ. ಆದರೆ ಕಪ್ಪು ಸಮುದ್ರದ ಬಾತುವಿಗೆ ಈ ಚುಕ್ಕೆ ಸ್ಪಷ್ಟವಾಗಿರುತ್ತದೆ.  ಇದರಿಂದ ಇವೆರಡನ್ನೂ ಪ್ರತ್ಯೇಕವಾಗಿ ಗುರುತಿಸುವುದು ಸುಲಭ. 

ಈ ಬದಲಾವಣೆಗೆ ಕಾರಣ ತಿಳಿದಿಲ್ಲ.  ಈ ಚುಕ್ಕಿ ಮತ್ತು ಕಪ್ಪು ಬಣ್ಣ ಅದರ ವಯಸ್ಸಿಗೆ ಅನುಗುಣವಾಗಿ ಚಿಕ್ಕದು, ದೊಡ್ಡದು ಆಗಿರುತ್ತದೆ.  ಉತ್ತರದ ಲಡಾಕಿನಲ್ಲಿದ್ದಾಗ ಕಪ್ಪು ತಲೆಯ ಬಾತುಗಳ ತಲೆ ಕಪ್ಪಾಗಿ ಇಲ್ಲವೇ ಕಂದು ಬಣ್ಣದಿಂದ ಕೂಡಿರುತ್ತದೆ. ಆದರೆ ಭಾರತಕ್ಕೆ ಬಂದಾಗ ಮಾತ್ರ ಇದರ ತಲೆಯಲ್ಲಿರುವ ಬಣ್ಣ ಮಾಯವಾಗಿ ಆಜಾಗದಲ್ಲಿ ಕಪ್ಪು ತಲೆಯ ಸಮುದ್ರ ಬಾತು ಆಗಿ ಮಾರ್ಪಡುತ್ತದೆ. ಇದರ ಪ್ರೈಮರಿ ಅಂದರೆ ಮೊದಲ ರೆಕ್ಕೆಯ ಗರಿಗಳ ತುದಿ ಕಪ್ಪು ಬಣ್ಣದಿಂದ ಕೂಡಿರುತ್ತದೆ.  

ಇದರ ಚುಂಚು ಗುಲಾಬಿ ಬಣ್ಣದ್ದು.  ಕಾಲಿನ ಹಾಗೂ ಜಾಲ ಪಾದದ ಬಣ್ಣ ಕೆಂಪು. ಇದರ ಕಣ್ಣಿನ ಸುತ್ತ ಬಿಳಿಬಣ್ಣವಿದೆ. ಕಣ್ಣಿನ ಪಾಪೆಯ ಮುಂಬಾಗದಲ್ಲಿ ಕೆಂಪು ಬಣ್ಣವಿರುತ್ತದೆ. ಕಪ್ಪು ತಲೆಯ ಸಮುದ್ರ ಬಾತುವಿನ ರೆಕ್ಕೆಯ ತುದಿ ಅಂಚು ಸ್ವಲ್ಪ ಮಾಸಲು ಕಂದುಬಣ್ಣ ಇದೆ. ಕಂದು ತಲೆಯ ಬಾತುವಿನ ರೆಕ್ಕೆಯ ಅಂಚು ಹೆಚ್ಚು ಕಪ್ಪು ಬಣ್ಣದ ಗರಿಗಳಿವೆ.  ಇದರಿಂದ ಇವೆರಡರ ವ್ಯತ್ಯಾಸ ಸುಲಭವಾಗಿ ತಿಳಿಯಬಹುದು.

Advertisement

ಭಾರತಕ್ಕೆ ಚಳಿಗಾಲದಲ್ಲಿ ಹೊಲಸೆ ಬರುತ್ತವೆ.  2-3 ಸಾವಿರದಷ್ಟು ಹಕ್ಕಿಗಳು ಒಂದೇ ಗುಂಪಿನಲ್ಲಿ ಕಾಣಬಹುದು. ಒಂದು ಹಾರಿದ ತಕ್ಷಣ ಇನ್ನೂಂದು ಅದನ್ನು ಅನುಸರಿಸುತ್ತದೆ.  ಇದರ ಹಾರುವಿಕೆ ತುಂಬಾ ವೈವಿಧ್ಯ. ಅದನ್ನು ಸೆರೆಹಿಡಿಯುವುದು ಛಾಯಾಗ್ರಾಹಕರಿಗೆ ಒಂದು ಸವಾಲೇ ಸರಿ.  ಇದರ ಗಾತ್ರ 33 ರಿಂದ 44 ಸೆಂ.ಮೀ. ಇರುತ್ತದೆ.  ಇದರ ರೆಕ್ಕೆಯ ಅಗಲ ಸುಮಾರು94 ರಿಂದ 105 ಸೆಂ.ಮೀ. ಒಟ್ಟಾರೆ ಇದು ಬಿಳಿ ಬಣ್ಣ ಪ್ರಧಾನವಾಗಿ ಕಾಣುವ ಹಕ್ಕಿ. ರೆಕ್ಕೆ ತುದಿ, ಪುಕ್ಕದ ಗರಿ ಮಾತ್ರ ಕಪ್ಪು.  ಎರಡು ವರ್ಷಕ್ಕೇ ಇದು ಪ್ರೌಢಾವಸ್ಥೆಗೆ ತಲುಪುತ್ತದೆ. ಚಿಕ್ಕ ಮರಿಗಳು ಹಳದಿ ಮಿಶ್ರಿತ ಕಂದು ತಿಳಿಬಣ್ಣದಿಂದ ಕೂಡಿರುತ್ತದೆ. ಬೆಳೆದಂತೆ ಮೈ ಬಿಳಿ ಬಣ್ಣವಾಗುತ್ತದೆ. ವಿಶೇಷ ಅಂದರೆ ಇದು ನಮ್ಮ ಒಳ ನಾಡಿನಲ್ಲಿ ಕಾಣುವುದಿಲ್ಲ. ಸಮುದ್ರ ತೀರದಲ್ಲೇ ಹೆಚ್ಚು ಕಾಣುತ್ತದೆ. ಕಡಲ ತೀರದಲ್ಲಿ ಮೀನುಗಾರರು ಎಸೆಯುವ ಮೀನು ತ್ಯಾಜ್ಯಗಳನ್ನು ತಿನ್ನಲು ಹಡಗಿನ ಸುತ್ತ ಇವು ಗಿರಕಿ ಹೊಡೆಯುವುದು.  

Advertisement

Udayavani is now on Telegram. Click here to join our channel and stay updated with the latest news.

Next