Advertisement

ಕರಾವಳಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧ ಕೊರತೆ !

10:50 PM Jun 03, 2021 | Team Udayavani |

ಮಂಗಳೂರು: ಕೋವಿಡ್ ನಿಯಂತ್ರಣ ಕ್ಕಾಗಿ ಈ ಹಿಂದೆ ನೀಡುತ್ತಿದ್ದ ರೆಮಿಡಿಸಿವಿರ್‌ ಕೊರತೆಯ ರೀತಿಯಲ್ಲೇ ಇದೀಗ ಬ್ಲ್ಯಾಕ್‌ ಫಂಗಸ್‌ಗೆ ಅಗತ್ಯವಿರುವ “ಆಂಫೋಟೆರಿಸಿನ್‌-ಬಿ’ ಔಷಧ ಕೊರತೆ ಕರಾವಳಿಯನ್ನು ಕಾಡುತ್ತಿದೆ.

Advertisement

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ 46 ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದ್ದು, “ಆಂಫೋ ಟೆರಿಸಿನ್‌-ಬಿ’ ರಾಜ್ಯ ಸರಕಾರದಿಂದ ಜಿಲ್ಲಾಸ್ಪತ್ರೆಗೆ ಸಮರ್ಪಕವಾಗಿ ಸರಬರಾಜಾ ಗುತ್ತಿಲ್ಲ. ಓರ್ವ ರೋಗಿಗೆ ದಿನವೊಂದಕ್ಕೆ 5ರಿಂದ 6 ವಯಲ್‌ ಔಷಧ ಬೇಕಾಗುತ್ತದೆ. ಆದರೆ ಕೊರತೆಯ ಕಾರಣ 3 ವಯಲ್‌ ಮಾತ್ರ ಸದ್ಯ ನೀಡ ಲಾಗುತ್ತಿದೆ ಎನ್ನುತ್ತವೆ ಆರೋಗ್ಯ ಇಲಾಖೆ ಮೂಲಗಳು.

ಖಾಸಗಿಯಿಂದಲೂ ಬೇಡಿಕೆ :

ಬ್ಲ್ಯಾಕ್‌ ಫಂಗಸ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡುತ್ತಿ ರುವುದರಿಂದ ಈ ಔಷಧಕ್ಕೆ ಬೇಡಿಕೆ ಹೆಚ್ಚಿದೆ. ಇದಕ್ಕಾಗಿ ಖಾಸಗಿಯವರು ಕೆಪಿಎಂಇ ಪೋರ್ಟಲ್‌ನಲ್ಲಿ ನೋಂದಾಯಿ ಸುವುದು ಕಡ್ಡಾಯ. ಅವುಗಳಿಗೆ ರಾಜ್ಯ ಸರಕಾರ  ದಿಂದ ನೇರವಾಗಿ ಪೂರೈಕೆಯಾಗುತ್ತದೆ. ಆದರೆ ಸರಬರಾಜು ಸಮರ್ಪಕವಾಗಿಲ್ಲ.

ದ.ಕ. ಜಿಲ್ಲೆಯಲ್ಲಿ ಸದ್ಯ ಬ್ಲ್ಯಾಕ್‌ ಫಂಗಸ್‌ನ 35 ಸಕ್ರಿಯ ಪ್ರಕರಣಗಳಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 11 ಮಂದಿ ಸಕ್ರಿಯ ಪ್ರಕರಣಗಳಿವೆ. ರಾಜ್ಯಕ್ಕೆ ಹೋಲಿಸಿದರೆ ದ.ಕ.ದಲ್ಲಿ ಇದು ವೇಗವಾಗಿ ಹಬ್ಬುತ್ತಿದೆ. ಸೋಮವಾರ ಒಂದೇ ದಿನ 10 ಮಂದಿಯಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿರುವ ಸಕ್ರಿಯ 35 ಪ್ರಕರಣಗಳಲ್ಲಿ 8 ಮಂದಿ ದ.ಕ.ದವರು ಮತ್ತು 27 ಮಂದಿ ಹೊರ ಜಿಲ್ಲೆಯವರು. ಮೃತಪಟ್ಟಿರುವ 6 ಮಂದಿಯ ಪೈಕಿ ಇಬ್ಬರು ದ.ಕ.ದವರು ಮತ್ತು ನಾಲ್ವರು ಹೊರ ಜಿಲ್ಲೆಯವರು.

Advertisement

ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸೂಕ್ತ ಚಿಕಿತ್ಸೆಗೆಂದು ವೆನ್ಲಾಕ್‌ ಜಿಲ್ಲಾಸ್ಪತ್ರೆಯನ್ನು ಪ್ರಾದೇಶಿಕ ಕೇಂದ್ರವನ್ನಾಗಿ ನಿಗದಿಪಡಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಯಿಲೆ ಏರಿಕೆ ಕಾಣುತ್ತಿದೆ. ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಸದ್ಯ ಔಷಧ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ನಿರಂತರ ಪೂರೈಕೆಗಾಗಿ ರಾಜ್ಯ ಸರಕಾರದ ಗಮನ ತರಲಾಗುವುದು.– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next