Advertisement
ಚಿತ್ರದುರ್ಗದಲ್ಲಿ ಪತ್ತೆಯಾಗಿರುವ ಈ ಚರ್ಮದ ಫಂಗಸ್ ಪ್ರಕರಣ ದೇಶದಲ್ಲೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
Related Articles
Advertisement
ಡಾ| ಪ್ರಹ್ಲಾದ್ ಬಳಿ ತಪಾಸಣೆಗೆಂದು ಬಂದಾಗ ಇದನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಕಿರು ಶಸ್ತ್ರಕ್ರಿಯೆಯ ಮೂಲಕ ಕಪ್ಪಾಗಿ ನಶಿಸಿಹೋದ ಕಿವಿಯ ಮೇಲ್ಬಾಗ ಹಾಗೂ ಕಿವಿಯ ಪಕ್ಕದ ಚರ್ಮದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದರು. ಈ ಸಮಯದಲ್ಲಿ ರೋಗಿಯಲ್ಲಿನ ಕಪ್ಪು ಫಂಗಸ್ ಸೋಂಕು ಕಿವಿಯ ಸುತ್ತಲಿನ ಮತ್ತು ತಲೆಯ ಮೇಲ್ಬಾಗದ ಚರ್ಮಕ್ಕೆ ಇನ್ನೂ ಹೆಚ್ಚಾಗಿ ಹರಡಿರುವುದನ್ನು, ತಜ್ಞ ಡಾ|| ಪ್ರಹ್ಲಾದ್ ಗುರುತಿಸಿದ್ದಾರೆ.
ಚಿತ್ರದುರ್ಗದ ವಾಸವಿ ಲ್ಯಾಬರೇಟರಿಯ ಡಾ|. ನಾರಾಯಣ ಮೂರ್ತಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ, ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಸುಧೀಂದ್ರರವರು ಸಹ ಚರ್ಮದ ಕಪ್ಪು ಫಂಗಸ್ ಸೋಂಕನ್ನು ದೃಢಪಡಿಸಿದ್ದಾರೆ.
ಪ್ರಸ್ತುತ ರೋಗಿಗೆ ಕಪ್ಪು ಫಂಗಸ್ ಸೋಂಕಿನಿಂದ ಹಾನಿಗೊಂಡಿರುವ ಚರ್ಮವನ್ನು ಸಂಪೂರ್ಣವಾಗಿ ತೆಗೆದುಹಾಕಿ ಆಂಪೋಟೆರಿಸಿನ್-ಬಿ ಚುಚ್ಚುಮದ್ದನ್ನು ನೀಡಿ ಮೊದಲ ಹಂತದ ಚಿಕಿತ್ಸೆಯನ್ನು ಮಾಡಬೇಕಾಗಿದೆ. ಎರಡನೇಯ ಹಂತದಲ್ಲಿ ಕಪ್ಪು ಫಂಗಸ್ ಸೋಂಕಿನಿಂದ ಸಂಪೂರ್ಣವಾಗಿ ರೋಗಿಯು ಗುಣಮುಕ್ತರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡು ಚರ್ಮದ ಕಸಿಯನ್ನು ಮಾಡಬೇಕಾಗಿರುತ್ತದೆ. ಇಲ್ಲಿಯವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 18 ಕಪ್ಪು ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ, ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಚಿತ್ರದುರ್ಗದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಲಾಗಿರುತ್ತದೆ. ಸಂಪೂರ್ಣ ಚಿಕಿತ್ಸೆಗೆ ಇವರೆಲ್ಲರಿಗೂ ಆಂಪೋಟೆರಿಸಿನ್-ಬಿ ಚುಚ್ಚುಮದ್ದು ಅತ್ಯಗತ್ಯವಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆವಿಗೆ 48 ಕಪ್ಪು ಫಂಗಸ್ ಕೇಸುಗಳು ವರದಿಯಾಗಿದ್ದು ಜಿಲ್ಲಾಧಿಕಾರಿಗಳು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿತ್ಸಕರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಈ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ