Advertisement

ಗೋವಾದಲ್ಲಿ ಬ್ಲ್ಯಾಕ್ ಫಂಗಸ್‍ಗೆ ಮೊದಲ ಬಲಿ

05:29 PM May 18, 2021 | Team Udayavani |

ಪಣಜಿ: ಗೋವಾದಲ್ಲಿ ಕೋವಿಡ್ ಮರಣ ಮೃದಂಗದ ನಡುವೆಯೇ ಬ್ಲ್ಯಾಕ್ ಫಂಗಸ್‍ಗೆ ರಾಜ್ಯದಲ್ಲಿ ಮಂಗಳವಾರ ಮೊದಲ ಬಲಿಯಾಗಿದೆ.

Advertisement

ರಾಜ್ಯದಲ್ಲಿ ಸದ್ಯ 6 ಜನ ಬ್ಲ್ಯಾಕ್ ಫಂಗಸ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋವಾ ಬಾಂಬೋಲಿಂ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.

ಗೋವಾದಲ್ಲಿ  ಕೋವಿಡ್  ಸೋಂಕು ದೃಢಪಡುವ ಪ್ರಮಾಣ ಶೇ 50 ರಿಂದ ಶೇ 33 ರಷ್ಟು ಇಳಿಕೆ ಕಂಡಿರುವ ಖುಷಿ ಒಂದೆಡೆಯಾದರೆ, ಬ್ಲ್ಯಾಕ್ ಫಂಗಸ್ ತನ್ನ ಮರಣಮೃದಂಗ ಬಾರಿಸುತ್ತಿರುವುದು ರಾಜ್ಯದ ಜನತೆಯನ್ನು ಭಯಭೀತರನ್ನಾಗಿಸಿದೆ.

ದಕ್ಷಿಣ ಗೋವಾದಲ್ಲಿ ಇನ್ನೂ ಎರಡು ಪ್ರಕರಣಗಳು ಬ್ಲ್ಯಾಕ್ ಫಂಗಸ್ ಸೋಂಕಿತರೇ..? ಎಂಬುದು ಖಚಿತವಾಗಿಲ್ಲ. ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 6 ಜನ ಕೋವಿಡ್ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಇರುವುದು ಖಚಿತವಾಗಿದೆ. ಇವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ ಎಂದು ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next