Advertisement
ಕೋವಿಡ್ ಸೋಂಕಿನ ಆತಂಕದ ನಡುವೆ ಬ್ಲ್ಯಾಕ್ ಫಂಗಸ್ ಕೂಡ ದೇಶದ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಕೋವಿಡ್ ಸೋಂಕಿನ ಭಯದೊಂದಿಗೆ ಮತ್ತೊಂದು ಭಯ ಹುಟ್ಟಿಕೊಂಡಿದೆ.
Related Articles
Advertisement
ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ಬೆಲೆ ಎಷ್ಟು..?
ಜೆನೆಟಿಕ್ ಲೈಫ್ ಸೈನ್ಸಸ್ ತಯಾರಿಸಿದ ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ನವೊಂದರ 1,200 ರೂ. ಎಂದು ಕೇಂದ್ರ ಸಚಿವಾಲಯ ಹೇಳಿದೆ.
ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ, ಜೆನೆಟಿಕ್ ಲೈಫ್ ಸೈನ್ಸಸ್ ಅವರ ಪ್ರಯತ್ನದಿಂದ, ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ತಯಾರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಔಷಧವನ್ನು ಕೇವಲ ಒಂದು ಕಂಪನಿ ಉತ್ಪಾದಿಸುತ್ತಿದೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ಈ ಔಷಧಿಗಳ ಒಂದು ಬಾಟಲಿಗೆ 1,200 ರೂ. ನಂತೆ ವಿತರಣೆಯು ಬರುವ ಸೋಮವಾರದಿಂದ ಆರಂಭವಾಗಲಿದೆ. ಪ್ರಸ್ತುತ, ಬಾಟಲುಗಳನ್ನು 7,000 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ” ಎಂದು ವಿವರಿಸಲಾಗಿದೆ.
ಇದನ್ನೂ ಓದಿ : ತರುಣ್ ತೇಜ್‍ಪಾಲ್ ಪ್ರಕರಣ : ಜೂನ್ 2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ 11 ರಾಜ್ಯಗಳು ಸೇರಿ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಔಷಧಿ ಕೊರತೆ ..! ಇನ್ನು, ದೇಶದಲ್ಲಿ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ರ ಅಡಿಯಲ್ಲಿ) ಆಂಫೊಟೆರಿಸಿನ್-ಬಿ ಯ ತೀವ್ರ ಕೊರತೆಯನ್ನು ಅನುಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಜೆನೆಟಿಕ್ ಲೈಫ್ ಸೈನ್ಸಸ್ ತಯಾರಿಸುತ್ತಿರುವ ಆಂಫೊಟೆರಿಸಿನ್-ಬಿ ಇಂಜೆಕ್ಶನ್ ಎಲ್ಲಾ ರೀತಿಯ ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಬಳಸುವ ಶಿಲೀಂಧ್ರ ವಿರೋಧಿ ಔಷಧವಾಗಿದೆ. ದೆಹಲಿ, ಬಿಹಾರ, ಹರಿಯಾಣ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣವು ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ನನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಿವೆ. ಇನ್ನು, ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಆಂಫೊಟೆರಿಸಿನ್ ಬಿ ನ ಹೆಚ್ಚುವರಿ 29,250 ಬಾಟಲುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ ಬುಧವಾರ ಹೇಳಿದ್ದರು. ಇದಕ್ಕೂ ಮೊದಲು ಮೇ 24 ರಂದು ಆಂಫೊಟೆರಿಸಿನ್-ಬಿ ನ ಹೆಚ್ಚುವರಿ 19,420 ಬಾಟಲುಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ ಔಷಧದ 23,680 ಬಾಟಲುಗಳನ್ನು ಸರಬರಾಜು ಮಾಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ : ಮೇಕೆದಾಟು ಯೋಜನೆ ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ: ಬೊಮ್ಮಾಯಿ