Advertisement
“ಬ್ಲ್ಯಾಕ್ ಫಂಗಸ್ ದೇಶದಲ್ಲಿ ಸುಮಾರು 7,000 ಕ್ಕೂ ಹೆಚ್ಚು ಕೋವಿಡ್ 19 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ.” ಎಂದು ಏಮ್ಸ್ ದೆಹಲಿಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ನೀಡಿರುವ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎ ಎನ್ ಐ ವರದಿ ಮಾಡಿದೆ.
Related Articles
Advertisement
ಏತನ್ಮಧ್ಯೆ, ದೇಶದಲ್ಲಿ ಕನಿಷ್ಠ 219 ಮಂದಿ ಈವರೆಗೆ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೇ, ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪಿದವರ ಬಗ್ಗೆ ಇನ್ನೂ ಅಧಿಕೃತ ಅಂಕಿ ಅಂಶಗಳಿಲ್ಲ.
ಇದನ್ನೂ ಓದಿ : ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ : ಮಾರ್ಗಸೂಚಿ ಸರಿಯಾಗಿ ಪಾಲಿಸಿದರೇ ಅನ್ಲಾಕ್ : ಕೇಜ್ರಿವಾಲ್
ಕಪ್ಪು ಶಿಲೀಂಧ್ರ ಎಂದರೇನು?
‘ಕಪ್ಪು ಶಿಲೀಂಧ್ರ’ ಅಥವಾ ‘ಮ್ಯೂಕೋರ್ಮೈಕೋಸಿಸ್’ ಎಂಬುದು ಅಪರೂಪದ ಶಿಲೀಂಧ್ರಗಳ ಸೋಂಕು, ಇದು ಮ್ಯೂಕರ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಆರ್ದ್ರ ಮೇಲ್ಮೈಗಳಲ್ಲಿ ಕಂಡುಬರುತ್ತದೆ. ಸಣ್ಣ ಕರುಳಿನ ಮ್ಯೂಕಾರ್ಮೈಕೋಸಿಸ್ ನ ಅಪರೂಪದ ಪ್ರಕರಣಗಳು ಇತ್ತೀಚೆಗೆ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ವರದಿಯಾಗಿವೆ.
ಕಪ್ಪು ಶಿಲೀಂಧ್ರವನ್ನು ಸಾಮಾನ್ಯ ಲಕ್ಚಣಗಳು ಯಾವುವು..?
ಮೂಗಿನ ರಕ್ತಸ್ರಾವ, ಕಪ್ಪ ಬಣ್ಣದ ಅಸಹಜ ಸ್ರಾವ, ಮೂಗಿನ ದಟ್ಟಣೆ, ತಲೆ ಮತ್ತು ಕಣ್ಣಿನ ನೋವು, ಕಣ್ಣುಗಳ ಬಳಿ ಬೆವರುವುದು, ದೃಷ್ಟಿ ಮಂದವಾಗುವುದು, ಕೆಂಪು ಕಣ್ಣುಗಳು, ಕಡಿಮೆ ಗೋಚರತೆ, ಕಣ್ಣು ತೆರೆಯಲು ಮತ್ತು ಮುಚ್ಚಲು ತೊಂದರೆಯಾಗುವುದು, ಮುಖದ ಮೇಲೆ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಭಾವನೆ, ಬಾಯಿ ತೆರೆಯುವಲ್ಲಿ ಅಥವಾ ಏನನ್ನಾದರೂ ಅಗಿಯುವಲ್ಲಿ ತೊಂದರೆ, ಹಲ್ಲುನೋವು ಉಂಟಾಗುವುದು ಇತ್ಯಾದಿ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ನ ಪ್ರಮುಖ ಲಕ್ಷಣಗಳು.
ಸ್ಟೀರಾಯ್ಡ್ ಗಳನ್ನು ವಿಕಿತ್ಸೆಗೆಂದು ನೀಡುತ್ತಿದ್ದ ಕೋವಿಡ್ 19 ಸೋಂಕಿತರಲ್ಲಿ ಮತ್ತು ವಿಶೇಷವಾಗಿ ಮಧುಮೇಹ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಕಂಡುಬರುತ್ತಿವೆ ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.
ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿ..?
ಬ್ಲ್ಯಾಕ್ ಫಂಗಸ್ ಗೆ ಆಂಫೊಟೆರಿಸಿನ್ ಬಿ ಅಥವಾ “ಆಂಫೊ-ಬಿ” ಎಂಬ ಆ್ಯಂಟಿ ಫಂಗಸ್ ಇಂಟ್ರಾವೆನಸ್ ಇಂಜೆಕ್ಷನ್ ನನ್ನು ಚಿಕಿತ್ಸೆಗೆ ನೀಡಲಾಗುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇನ್ನು, ಆಂಫೊಟೆರಿಸಿನ್-ಬಿ ಲಭ್ಯತೆಯನ್ನು ಹೆಚ್ಚಿಸಲಾಗುತ್ತಿದೆ. ಹೆಚ್ಚುವರಿ ಇಂಜೆಕ್ಶನ್ ಗಳ ಲಭ‍್ಯತೆಗಾಗಿ ಉತ್ಪಾದಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉತ್ತಮ: ಸುರೇಶ್ ಕುಮಾರ್