Advertisement
ಕೊರೊನಾದಿಂದ ಗುಣಮುಖರಾದ ಅಥವಾಚಿಕಿತ್ಸೆ ಪಡೆಯುತ್ತಿರುವ ಮಧುಮೇಹ ಇದ್ದವರಿಗೆಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದ್ದು, ಜೀವಕ್ಕೆಸಂಕಷ್ಟ ತಂದಿದೆ. ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆ ಈ ಸೋಂಕು ಕಾಣಿಸಿಕೊಂಡು ಮೂಗು, ಚರ್ಮ, ಕೆನ್ನೆ, ಹಣೆ,ಮೆದುಳು, ಕಣ್ಣಿಗೆ ಹಾನಿ ಮಾಡಿ, ಜೀವ ತೆಗೆಯುವ ಹಂತಕ್ಕೂ ಹೋಗುತ್ತಿದೆ.
Related Articles
Advertisement
ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಿ: ಜಿಲ್ಲೆಯಲ್ಲಿದಿನೇ ದಿನೆ ಕಪ್ಪು ಶಿಲೀಂಧ್ರ ಸೋಂಕು ಹರಡುತ್ತಿದ್ದು,ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿಸೋಂಕು ನಿಯಂತ್ರಿಸಬೇಕು. ಸೋಂಕಿತರು ಬೆಂಗಳೂರು ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ಇದೆ.ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನೂತನವಾಗಿನೇಮಕಗೊಂಡಿದ್ದರೂ, ಯಾವುದೇ ಪ್ರಯೋಜನವಾಗದಂತಾಗಿದೆ. ಕೇವಲ ಕೊರೊನಾ ನಿಯಂತ್ರಣಕ್ಕೆಮಾತ್ರ ಮುಂದಾಗಿರುವ ಆರೋಗ್ಯ ಇಲಾಖೆ, ಕಪ್ಪುಶಿಲೀಂಧ್ರ ಸೋಂಕನ್ನು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ: ಜಿಲ್ಲೆಯಲ್ಲಿ 5 ಕಪ್ಪುಶಿಲೀಂಧ್ರ ಸೋಂಕಿತರು ಬೆಂಗಳೂರಿನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಹೇಳುತ್ತಿದೆ. ಆದರೆ, ಇಲಾಖೆ ಗಮನಕ್ಕೆ ಬಾರದ ಇತರೆಸೋಂಕಿತರು ಲಕ್ಷಂತರ ರೂ. ಖರ್ಚು ಮಾಡಿದ್ದರೂಸಂಪೂರ್ಣವಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರಿಇಲಾಖೆಗಳು ಜಿಲ್ಲೆಯಲ್ಲಿ ಚಿಕಿತ್ಸೆ ಆರಂಭಿಸಲುಮೀನಮೇಷ ಎಣಿಸುತ್ತಿದೆ.
ಬೆಂಗಳೂರಿನ ಬೋರಿಂಗ್,ವಿಕ್ಟೋರಿಯಾ, ಮಾರ್ಥಸ್ ಆಸ್ಪತ್ರೆಗಳಿಗೆ ಹೋಗಲಿರುವಕಪ್ಪು ಶಿಲೀಂಧ್ರ ಸೋಂಕಿತರಿಗೆ ಅಗತ್ಯ ಮಾಹಿತಿ ವಿನಿಮಯಕ್ಕೆ ನೋಡಲ್ ಅಧಿಕಾರಿಯನ್ನು ಆರೋಗ್ಯಾಧಿಕಾರಿ ನೇಮಕ ಮಾಡಿಲ್ಲ. ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರಗೆಸಂಬಂಧಿಸಿದಂತೆ ಸೂಕ್ತ ಜಾಗೃತಿ, ಮಾಹಿತಿ ತಿಳಿಸುವಯಾವುದೇ ಕೆಲಸವನ್ನು ಮಾಡದ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನ ಆಸ್ಪತ್ರೆಗಳಿಗೆ ಮುಖಮಾಡಿ, ಪರದಾಡುವಪರಿಸ್ಥಿತಿ ಬಂದಿದೆ ಎಂದು ಕೇಳಿ ಬರುತ್ತಿದೆ.
ಎಸ್ ಮಹೇಶ್