Advertisement

ಮಾರಣಾಂತಿಕ ಕಪ್ಪು ಶಿಲೀಂಧ್ರ :ಕೋವಿಡ್ ನಡುವೆ ಫಂಗಸ್ ಭೀತಿ

12:18 AM May 11, 2021 | Team Udayavani |

ದೇಶದಲ್ಲಿ ಕೋವಿಡ್‌-19 ಬಳಿಕ ಮತ್ತೂಂದು ಫ‌ಂಗಸ್‌ನ ಅಪಾಯ ಎದುರಾಗಿದೆ. ಆಘಾತಕಾರಿ ಅಂಶ ಎಂದರೆ ಕೊರೊನಾ ಬಂದು ಗುಣಮುಖರಾದವರಲ್ಲಿ ಮ್ಯುಕೋರ್‌ವೆುçಕೋಸಿಸ್‌ ಅಥವಾ “ಕಪ್ಪು ಶಿಲೀಂಧ್ರ’ ಸೋಂಕು ವರದಿಯಾಗುತ್ತಿದೆ. ಮ್ಯುಕೋರ್‌ವೆುçಕೋಸಿಸ್‌ ಎಂಬುದು ಒಂದು ಶಿಲೀಂಧ್ರ ಸೋಂಕಾಗಿದೆ. ಇದು ಮುಖ್ಯವಾಗಿ ಈಗಾಗಲೇ ಔಷಧಿಗಳನ್ನು ಪಡೆಯುತ್ತಿರುವ ಜನರ ಮೇಲೆ ದಾಳಿ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ದೇಹದಲ್ಲಿ ರೋಗಕಾರಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ರೋಗವು ತುಂಬಾ ಅಪಾಯಕಾರಿಯಾಗಿದ್ದು, ಜನರು ತಮ್ಮ ಜೀವ ಉಳಿಸಲು ಹರಸಾಹಸ ಪಡಬೇಕಾಗುತ್ತದೆ.

Advertisement

ಈಗಾಗಲೇ ರಾಜಸ್ಥಾನ, ಪಂಜಾಬ್‌, ದಿಲ್ಲಿ, ಗುಜರಾತ್‌ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ನವೆಂಬರ್‌ನಲ್ಲಿಯೇ ಇದು ಸುದ್ದಿಯಾಗಿತ್ತು. ಈಗ ಮತ್ತೆ ಈ ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಿದೆ. ಕೆಲವರು ಇದರಿಂದ ಸಾವನ್ನಪ್ಪಿದರೆ ಮತ್ತೂ ಕೆಲವರನ್ನು ಸೋಂಕಿನಿಂದ ರಕ್ಷಿಸಲು ಸೋಂಕು ಉಲ್ಬಣಿಸಿದ ಅ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ತೆಗೆಯಬೇಕಾಗುತ್ತದೆ. ಈ ನಡುವೆ ದೇಶದಲ್ಲಿ ಹೆಚ್ಚು ಪ್ರಕರಣಗಳಿಲ್ಲ ಎಂದು ನೀತಿ ಆಯೋಗ ಹೇಳಿದೆ. ಆದರೆ ಮಧುಮೇಹ ಹೊಂದಿರುವವರಲ್ಲಿ ಹೆಚ್ಚಿನವರು ಈ ಸೋಂಕಿಗೆ ಒಳಗಾಗುತ್ತಿದ್ದಾರೆ.

ಹಾಗಾದರೆ ಇದು ಹೊಸ ರೋಗವೇ? ಇದರ ಲಕ್ಷಣಗಳು ಯಾವುವು? ಇದು ಎಷ್ಟು ಅಪಾಯಕಾರಿ? ಈ ರೋಗವು ಯಾರಿಗಾದರೂ ಸಂಭವಿಸಿದರೆ ಸಾವಿನ ಅಪಾಯ ಇದ್ಯಾ? ಅದನ್ನು ತಪ್ಪಿಸುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕಪ್ಪು ಶಿಲೀಂಧ್ರ ಎಂದರೇನು?
ಇದು ಶಿಲೀಂಧ್ರ ರೋಗ. ಮ್ಯುಕೋರ್‌ವೆುçಕೋಸಿಸ್‌ ಎಂಬ ಶಿಲೀಂಧ್ರದಿಂದ ಬರುತ್ತದೆ. ಈಗಾಗಲೇ ಸೋಂಕಿನಿಂದ ಬಳಲುತ್ತಿರುವ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಔಷಧಿಯನ್ನು ತೆಗೆದುಕೊಳ್ಳುವ ಜನರಿಗೆ ಇದು ಹೆಚ್ಚಾಗಿ ದಾಳಿ ಮಾಡುತ್ತದೆ. ಇದು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಇದರ ಅಪಾಯ ಶಿಲೀಂಧ್ರ ದಾಳಿ ಮಾಡಿದ ಸ್ಥಳದ ಮೇಲೆ ಅವಲಂಬಿಸಿದೆ.

ಲಕ್ಷಣಗಳು ಯಾವುವು?
ಈ ರೋಗದ ಲಕ್ಷಣಗಳು ಸೋಂಕಿಗೆ ಒಳಗಾದ ಭಾಗಗಳ ಮೇಲೆ ನಿರ್ಧರಿತವಾಗುತ್ತದೆ. ಮುಖದ ಒಂದು ಬದಿಯ ಊತ, ತಲೆನೋವು, ಮೂಗಿನ ಸುತ್ತ ಊತ, ವಾಂತಿ, ಜ್ವರ, ಎದೆ ನೋವು, ವಿಪರೀತ ಸೈನಸ್‌, ಬಾಯಿಯ ಮೇಲಿನ ಭಾಗ ಅಥವಾ ಮೂಗಿನಲ್ಲಿ ಕಪ್ಪು ಹುಣ್ಣುಗಳು, ಕಣ್ಣು ಅಥವಾ ಮೂಗಿನ ಸುತ್ತ ನೋವು ಮತ್ತು ಕೆಂಪಾಗುವುದು ಇದರ ಸಾಮಾನ್ಯ ಲಕ್ಷಣಗಳಾಗಿವೆ.

Advertisement

ಕಪ್ಪು ಶಿಲೀಂಧ್ರ ಎಲ್ಲಿಂದ ಬರಬಹುದು?
ಇದು ತುಂಬಾ ಗಂಭೀರವಾಗಿದೆ. ಆದರೆ ಅಪರೂಪದ ಸೋಂಕು. ಈ ಶಿಲೀಂಧ್ರವು ಪರಿಸರದಲ್ಲಿ ಎಲ್ಲಿಯಾದರೂ ವಾಸಿಸಬಹುದು. ವಿಶೇಷವಾಗಿ ನೆಲ ಮತ್ತು ಕೊಳೆಯುತ್ತಿರುವ ಸಾವಯವ ವಸ್ತುಗಳಲ್ಲಿ ಕಂಡುಬರುತ್ತದೆ. ಎಲೆಗಳು, ಕಾಂಪೋಸ್ಟ್‌ ಗೊಬ್ಬರಗಳಲ್ಲಿ ಕಂಡುಬರುತ್ತದೆ. ಸರಿಯಾಗಿ ಬೆಳಕಿಲ್ಲದ ಸ್ಥಳ, ಕಟ್ಟಡ ನಿರ್ಮಾಣದ ಜಾಗ(ಧೂಳು), ಮೆಡಿಕಲ್‌ ವೇಸ್ಟ್‌ಗಳ ಸಹಿತ ಎಲ್ಲಿ ಸ್ವತ್ಛತೆ ಇಲ್ಲ ಅಂಥ ಕಡೆಗಳಿಂದ ಹರಡುತ್ತದೆ.

ಇದು ದೇಹವನ್ನು ಹೇಗೆ ತಲುಪುತ್ತದೆ? ಪರಿಣಾಮ ಏನು?
ಈ ಶಿಲೀಂಧ್ರ ನಮ್ಮ ಪರಿಸರದಲ್ಲೇ ಇದೆ. ಸಾಮಾನ್ಯವಾಗಿ ನಮ್ಮ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಬಹಳ ಮುಖ್ಯವಾಗಿ ದೇಹದಲ್ಲಿ ಯಾವುದೇ ರೀತಿಯ ಗಾಯಗಳಾಗಿದ್ದರೆ ಅಥವಾ ದೇಹಕ್ಕೆ ಸುಟ್ಟಗಾಯಗಳಿದ್ದರೆ ಶಿಲೀಂಧ್ರ ಅಲ್ಲಿಂದ ಇತರ ಕಡೆಗೆ ಹರಡಬಹುದು. ಆರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚಲು ವಿಫ‌ಲವಾದರೆ ಪ್ರಾಣವನ್ನು ಅಪಾಯಕ್ಕೆ ಒಡ್ಡಲಿದೆ.

ಎಷ್ಟು ಅಪಾಯ
ಇದು ಸಾಂಕ್ರಾಮಿಕ ರೋಗ ಎಂಬ ವಾದಗಳೂ ಇವೆ. ಸೋಂಕಿತರಲ್ಲಿ ಶೇ. 54ರಷ್ಟು ರೋಗಿಗಳು ಸಾಯುತ್ತಾರೆ. ಉದಾಹರಣೆಗೆ ಸೈನಸ್‌ ಸೋಂಕಾದರೆ ಮರಣ ಪ್ರಮಾಣ ಶೇ. 46ರಷ್ಟಿರುತ್ತದೆ. ಶ್ವಾಸಕೋಶದ ಸೋಂಕು ಶೇ. 76ರಷ್ಟು ಮರಣ ಪ್ರಮಾಣವನ್ನು ಹೊಂದಿದೆ ಎಂದು ಯುಎಸ್‌ ಏಜೆನ್ಸಿ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನÒನ್‌ (ಸಿಡಿಸಿ) ವರದಿ ಹೇಳಿದೆ. ಅದೇ ವರದಿಯಲ್ಲಿ ಪ್ರಪಂಚದ ಪ್ರತಿಯೊಂದು ರೀತಿಯ ಸೋಂಕಿನಲ್ಲಿ ಮ್ಯುಕೋರ್‌ವೆುçಕೋಸಿಸ್‌ ಸೋಂಕಿನ ಪ್ರಕರಣಗಳು ಕೇವಲ ಶೇ. 2ರಷ್ಟು ಮಾತ್ರ ಸಂಭವಿಸುತ್ತವೆ ಎಂದು ವರದಿಯಾಗಿದೆ. ಈ ಶಿಲೀಂಧ್ರವು ನಮ್ಮ ದೇಹದ ಕೆಲವು ಭಾಗವನ್ನು ನಾಶಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಅದರ ಪರಿಣಾಮವು ತಲೆಯಲ್ಲಿ ಸಂಭವಿಸಿದಲ್ಲಿ ಮಿದುಳಿನ ಗೆಡ್ಡೆಗಳು ಸಹಿತ ಅನೇಕ ರೀತಿಯ ರೋಗಗಳು ಸಂಭವಿಸಲಿವೆ. ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ತಪ್ಪಿಸಬಹುದು. ಕೊರೊನಾದಿಂದಾಗಿ ಅನೇಕ ಜನರು ದುರ್ಬಲರಾಗಿದ್ದು ಹೀಗಾಗಿ ಶಿಲೀಂಧ್ರದ ಅಪಾಯ ಕೂಡ ಹೆಚ್ಚಾಗಿದೆ.

ಕೊರೊನಾಕ್ಕೂ ಇದಕ್ಕೂ ಏನು ಸಂಬಂಧ?
ಮಧುಮೇಹ, ಕ್ಯಾನ್ಸರ್‌ ಹೊಂದಿರುವವರು, ಅಂಗಾಂಗ ಕಸಿ ಮಾಡಿದವರು, ದೀರ್ಘ‌ ಕಾಲದವರೆಗೆ ಸ್ಟೀರಾಯ್ಡಗಳನ್ನು ಬಳಸುತ್ತಿರುವವರು, ಚರ್ಮದ ಗಾಯವನ್ನು ಹೊಂದಿರುವವರು ಮತ್ತು ಅಕಾಲಿಕ ಮಗುವಿಗೆ ಸಹ ಇದು ಸಂಭವಿಸಬಹುದು. ಕೊರೊನಾ ದಿಂದಲೂ ಇದು ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಕಪ್ಪು ಶಿಲೀಂಧ್ರ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಬಹಳ ಮುಖ್ಯವಾಗಿ ಸ್ಟೀರಾಯ್ಡ ಔಷಧಗಳು ದೇಹದ ಪ್ರತೀರಕ್ಷಣ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುತ್ತದೆ. ಇದು ಇಂಥ ಸೋಂಕಿಗೆ ನಮ್ಮ ದೇಹ ಸುಲಭವಾಗಿ ತುತ್ತಾಗಲು ಎಡೆಮಾಡಿಕೊಡುತ್ತದೆ. ಆದರೆ ರೋಗನಿರೊಧಕ ಶಕ್ತಿ ಹೆಚ್ಚು ಇದ್ದರೆ ಇದು ಕಾಣಿಸಿಕೊಳ್ಳುವುದಿಲ್ಲ.

ಇದನ್ನು ಹೇಗೆ ತಪ್ಪಿಸಬಹುದು?
ಆರೋಗ್ಯ ತಜ್ಞರ ಪ್ರಕಾರ ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ಸ್ಥಳದಿಂದ ಆದಷ್ಟು ದೂರ ಇರುವುದು ಉತ್ತಮ. ಧೂಳಿನ ಪ್ರದೇಶಕ್ಕೆ ಕಾಯಿಲೆ ಇರುವವರು ಹೋಗಲೇಬಾರದು. ತೋಟಗಾರಿಕೆ ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗ ಪೂರ್ಣ ತೋಳುಗಳಿರುವ ಕೈಗವಸುಗಳನ್ನು, ಮಾಸ್ಕ್ಗಳನ್ನು ಧರಿಸಿ, ಕೊಳಚೆ ನೀರು ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಒಳಚರಂಡಿ ನೀರನ್ನು ಸಂಗ್ರಹಿಸುವ ಸ್ಥಳಕ್ಕೆ ಹೋಗಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕೊರೊನಾ ಗುಣಮುಖರಾದ ಅನಂತರವೂ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಶಿಲೀಂಧ್ರದ ಯಾವುದೇ ಲಕ್ಷಣಗಳು ಕಂಡುಬಂದರೆ ತತ್‌ಕ್ಷಣ ವೈದ್ಯರ ಸಲಹೆ ಪಡೆಯಬೇಕು. ಈ ಕಾರಣದಿಂದಾಗಿ ಈ ಶಿಲೀಂಧ್ರವು ಆರಂಭಿಕ ಹಂತದಲ್ಲಿ ಪತ್ತೆಯಾಗಿ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಚಿಕಿತ್ಸೆಯಲ್ಲಿ ಸ್ವಲ್ಪ ವಿಳಂಬ ಮಾಡಿದರೆ ರೋಗಿಯ ದೇಹದ ಸೋಂಕಿತ ಭಾಗ ಅಂದರೆ ಈ ಶಿಲೀಂಧ್ರ ಸೋಂಕು ಸಂಭವಿಸಿದ ಸ್ಥಳ ಕೊಳೆಯಲು ಪ್ರಾರಂಭವಾಗುತ್ತದೆ. ಇಂಥ ಸಂದರ್ಭ ಅದರ ಶಸ್ತ್ರ ಚಿಕಿತ್ಸೆ ತೀರಾ ಅಗತ್ಯವಾಗಿದೆ. ಇಲ್ಲದಿದ್ದರೆ ರೋಗಿಯು ತನ್ನ ಪ್ರಾಣವನ್ನು ಕಳೆದುಕೊಳ್ಳುವ ಅಪಾಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next