Advertisement
ಅಲಸಂಡೆ ಬೀಜವು ಸಾಕಷ್ಟು ಪೋಷಕಾಂಶ, ವಿಟಮಿನ್ ಹೊಂದಿದೆ. ಈ ಸಣ್ಣ ಬೀಜ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದು ಉತ್ತಮ.·ಕಡಿಮೆ ಕೊಬ್ಬು ಮತ್ತು ಕ್ಯಾಲೊರಿ ಹೊಂದಿರುವ ಅಲಸಂಡೆ ಬೀಜವು ಹೃದಯದ ಆರೋಗ್ಯಕ್ಕೆ ಉತ್ತಮ. ಚರ್ಮ, ಉಗುರು, ಕೂದಲು ಮತ್ತು ಸ್ನಾಯುಗಳ ಬಲಗೊಳಿಸಿ, ದೇಹದ ಬೆಳವಣಿಗೆಗೆ ಬೇಕಾದ ಪ್ರೋಟಿನ್ ಅನ್ನು ಒದಗಿಸುತ್ತದೆ.
·ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೂ ಉತ್ತಮ. ಕಣ್ಣಿನ ರೆಟಿನಾ ಭಾಗದಲ್ಲಿ ಇದು ವರ್ಣದ್ರವ್ಯ ಉತ್ಪತ್ತಿ ಮಾಡುವ ಮೂಲಕ ಕಣ್ಣಿನ ರಕ್ಷಣೆ ಮಾಡುತ್ತದೆ.
· ಅಲಸಂಡೆ ಬೀಜದಲ್ಲಿ ನಾರಿನ ನಾಂಶ ಅಧಿಕವಾಗಿದ್ದು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಸಣ್ಣ ಕರುಳು ಮತ್ತು ದೊಡ್ಡ ಕರುಳಿನಲ್ಲಿ ಜಮೆಯಾದ ಕೊಲೆಸ್ಟ್ರಾಲ್ ಅನ್ನು ಶುದ್ಧೀಕರಿಸುವ ಈ ಬೀಜವು ಹೃದಯಾಘಾತ, ಪಾರ್ಶ್ವವಾಯು ಮತ್ತು ಎದೆನೋವು ಉಂಟು ಮಾಡುವಂಥ ಅಪಧಮನಿಗಳಲ್ಲಿರುವ ತೊಂದರೆ ನಿವಾರಿಸುತ್ತದೆ.
ಇದರಲ್ಲಿನ ನಾರಿನಾಂಶ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ಇದು ಇನ್ಸುಲಿನ್ ಮತ್ತು ಲಿಪಿಡ್ ಮಟ್ಟವನ್ನು ಸುಧಾರಿಸುತ್ತದೆ. ಹೀಗಾಗಿ ಮಧುಮೇಹಿಗಳಿಗೂ ಒಳ್ಳೆಯದು.
·ಅಲಸಂಡೆ ಬೀಜದಲ್ಲಿರುವ ನಾರಿನಾಂಶವು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿಂದು ಹೆಚ್ಚಿನ ಕ್ಯಾಲರಿ ಸೇವಿಸದಂತೆ ತಡೆಯುವುದು. ಇದರಿಂದ ಬೊಜ್ಜು ದೂರವಿಡಬಹುದು.
·ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಉಂಟಾಗುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಬೀಜವನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಇದರಲ್ಲಿ ಉನ್ನತ ಮಟ್ಟದ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು.
·ಅತ್ಯಧಿಕ ಕಬ್ಬಿಣಾಂಶ ಹೊಂದಿರುವ ಇದನ್ನು ಹಿಮೋಗ್ಲೋಬಿನ್ ಕಡಿಮೆಯಿದ್ದವರು ಸೇವಿಸಿದರೆ ಸೂಕ್ತ.