Advertisement
ಸಾಮಾನ್ಯವಾಗಿ ಕೆಲಸದ ಒತ್ತಡ, ಮಾನಸಿಕ ಒತ್ತಡ, ನಿದ್ದೆ ಸರಿಯಾಗಿ ಆಗದೇ ಇದ್ದಲ್ಲಿ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಬೀಳುತ್ತವೆ ಎಂದು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಆದ್ದರಿಂದ ಇವುಗಳನ್ನು ಹೋಗಲಾಡಿಸಲು ಕೆಲವು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿರುತ್ತದೆ.
ನಿಮ್ಮ ಬಿಡುವಿನ ವೇಳೆಯಲ್ಲಿ ಅಂಡರ್ ಐ ಕ್ರೀಮ್‌ಗಳನ್ನು ಬಳಸಿ ನೋಡಿ. ಇದರಲ್ಲಿ ಹೆಚ್ಚು ಮಾಯಿಶ್ಚರೈಸರ್ ಇರುವುದರಿಂದ ಇದು ಕಣ್ಣಿನ ಆರೈಕೆ ಮಾಡುತ್ತದೆ. ಅದಲ್ಲದಿದ್ದರೆ ಅಮೈನೋ ಮತ್ತು ಮಿನರಲ್ಸ್ ಇರುವ ಕ್ರೀಮ್‌ಗಳನ್ನು ಬಳಸುವುದು ಉತ್ತಮ. ಇಲ್ಲವಾದಲ್ಲಿ ಅಂಡರ್ ಐ ಪ್ಯಾಚ್‌ಗಳನ್ನು ಬಳಸುವುದರಿಂದ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ಇದನ್ನು ಹಚ್ಚಿ 20 ಅಥವಾ 25 ನಿಮಿಷಗಳ ಅನಂತರ ಮುಖವನ್ನು ಉಗುರು ಬಿಸಿ ನೀರಿನಲ್ಲಿ ತೊಳೆಯುವುದರಿಂದ ಶೀಘ್ರದಲ್ಲೇ ಫಲಿತಾಂಶ ಕಂಡು ಬರುತ್ತದೆ. ಮನೆ ಮದ್ದು ಉತ್ತಮ
ಮನೆಗಳಲ್ಲಿ ಸಿಗುವ ಲೋಳೆರಸ ಅಥವಾ ಅರಿಶಿನವನ್ನು ಬಳಸುವುದರಿಂದ ಕಪ್ಪುವರ್ತುಲಗಳನ್ನು ನಿವಾರಿಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.
Related Articles
ಸೌತೆಕಾಯಿ ರಸವನ್ನು ಹಚ್ಚಿ 15 ರಿಂದ 20 ನಿಮಿಷಗಳ ಬಳಿಕ ತೊಳೆಯುವುದರಿಂದ ಪರಿಣಾಮಕಾರಿಯಾಗಿ ಕಂಡುಬರುತ್ತದೆ. ಸಾಧ್ಯವಾದಷ್ಟು ಇದನ್ನು ವಾರದಲ್ಲಿ ಮೂರು ಬಾರಿಯಾದರೂ ಹಚ್ಚುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.
Advertisement
ಬಾದಾಮಿ ಎಣ್ಣೆ ರಾತ್ರಿ ಮಲಗುವ ಮೊದಲು ಸ್ವಲ್ಪ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಕಪ್ಪು ಕಲೆ ಮಾಯವಾಗುವುದಲ್ಲದೆ ಸುಂದರ ತ್ವಚೆ ನಿಮ್ಮದಾಗುತ್ತದೆ. ಇದನ್ನು ಆದಷ್ಟು ಮೃದುವಾಗಿ ಹಚ್ಚಿ ಅನಂತರ ನಿದ್ರೆ ಮಾಡಬೇಕು. ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು ಕೆಲವು ರೀತಿಯ ಕ್ರೀಮ್‌ಗಳು ಲಭ್ಯವಿದ್ದು ಅವುಗಳನ್ನು ಬಳಸಬಹುದು. ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.