Advertisement

ಕಣಿವೆ ರಾಜ್ಯಕ್ಕೆ ಬ್ಲ್ಯಾಕ್‌ ಕ್ಯಾಟ್‌ ಬಲ

07:00 AM May 02, 2018 | Team Udayavani |

ಜಮ್ಮು ಕಾಶ್ಮೀರದಲ್ಲಿ ದಿನನಿತ್ಯ ಉಗ್ರರೊಂದಿಗೆ ಸೆಣಸಾಡುತ್ತಿರುವ ಭದ್ರತಾ ಪಡೆಗಳಿಗೆ ಸಹಾಯಕವಾಗಿ ರಾಷ್ಟ್ರೀಯ ಭದ್ರತಾ ಪಡೆ (NSG) ಕಮಾಂಡೋಗಳನ್ನು ನಿಯೋಜಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ‘ಬ್ಲ್ಯಾಕ್‌ ಕ್ಯಾಟ್‌’ಗಳೆಂದೇ ಕರೆಯಲ್ಪಡುವ NSG ಸಿಬ್ಬಂದಿ ಕಣಿವೆ ರಾಜ್ಯದಲ್ಲಿ ನಿಯೋಜನೆಗೊಂಡರೆ, ಅಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಪಡೆಗಳಿಗೆ ಹೊಸ ಬಲ ಬಂದಂತಾಗುತ್ತದೆ.

Advertisement

ಸೇರ್ಪಡೆಗೆ ಕಾರಣ
– ಉಗ್ರರ ಉಪಟಳ ಹೆಚ್ಚಳ
– ನುಸುಳುಕೋರರ ಸಂಖ್ಯೆಯಲ್ಲಿ ಏರಿಕೆ 
– ಸೇನಾ ಶಿಬಿರಗಳ ಮೇಲೆ ದಾಳಿ ವೇಳೆ ಮತ್ತೂಂದು ಸಶಕ್ತ  ಪಡೆಯ ಆವಶ್ಯಕತೆ
– ಹುತಾತ್ಮ ಸೈನಿಕರಿಂದಾಗಿರುವ ಯೋಧರ ಕೊರತೆ

ಇವರೇ ಏಕೆ? 
– ಉಗ್ರರೊಂದಿಗೆ ಕಾದಾಡುವಲ್ಲಿ ಹೆಚ್ಚಿನ ನಿಪುಣತೆ ಹೊಂದಿರುವುದು

– ಉಗ್ರರು ಹೊಕ್ಕಿರುವ ಮನೆಯೊಳಗೆ ನುಗ್ಗುವಲ್ಲಿ ವಿಶೇಷ ತರಬೇತಿ ಪಡೆದಿರುವುದು

– ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ವಿಚಾರದಲ್ಲಿ ಛಾತಿ ಗಳಿಸಿರುವುದು

Advertisement

ಪ್ರಯೋಜನ?
– ಭದ್ರತಾ ಪಡೆಗಳಿಗೆ ಮತ್ತಷ್ಟು ಬಲ

– ಸಿಬ್ಬಂದಿ ಕೊರತೆ ನಿವಾರಣೆ

– ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲು ಸಾಧ್ಯ

– ಉಗ್ರರನ್ನು ಪರಿಣಾಮಕಾರಿ ಯಾಗಿ ಮಟ್ಟ ಹಾಕುವುದು

ಬಳಸುವ ಶಸ್ತ್ರಾಸ್ತ್ರ
– ಅತ್ಯಾಧುನಿಕ ಹೆಕ್ಲೆರ್‌ ಆ್ಯಂಡ್‌ ಕಾಶ್‌ ಎಂಪಿ 5  ಸಬ್‌ ಮೆಷಿನ್‌ ಗನ್‌
– ಸ್ನ್ಯಾಪರ್‌ ರೈಫ‌ಲ್‌ಗ‌ಳು 
– ಗೋಡೆ ಬೇಧಿಸುವ ರೇಡಾರ್‌
– ಸಿ- 4 ಸ್ಫೋಟಕಗಳು

– 1984ರಲ್ಲಿ ಸ್ಥಾಪನೆ
– ಮೊದಲ ಕಾರ್ಯಾಚರಣೆ:
ಆಪರೇಷನ್‌ ಬ್ಲೂ ಸ್ಟಾರ್‌
– ಕ​​​​​​​ಮಾಂಡೋ ಬಲ: 7500
– ಪ್ರತಿ ತಂಡದ ಸಿಬ್ಬಂದಿ:
ನಾನ್‌-ಕಮೀಷನ್ಡ್ ಅಧಿಕಾರಿ ನೇತೃತ್ವದಲ್ಲಿನ ಪ್ರತಿ ತಂಡದಲ್ಲಿ ಐವರು ಕಮಾಂಡೋ, ಬಾಂಬ್‌ ನಿಷ್ಕ್ರಿಯ ತಜ್ಞ, ಮುಸುಕುಧಾರಿ ವ್ಯಕ್ತಿಗಳ ನಿಜ ವೇಷ ಪತ್ತೆ ಹಚ್ಚುವ ತಂತ್ರಜ್ಞ. 

Advertisement

Udayavani is now on Telegram. Click here to join our channel and stay updated with the latest news.

Next