Advertisement

ಅಚ್ಚರಿಯ ಮಾಹಿತಿ ಕಣಜ: ಬ್ಲ್ಯಾಕ್‌ ಬಾಕ್ಸ್‌

10:57 PM Dec 09, 2021 | Team Udayavani |

ಜ|ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿಯ ದುರ್ಮರಣಕ್ಕೆ ಕಾರಣವಾಗಿರುವ ದುರಂತ ಹೇಗೆ ಉಂಟಾಯಿತು ಎನ್ನುವುದೇ ಈಗ ಪ್ರಶ್ನೆಯಾಗಿದೆ. ತಮಿಳುನಾಡಿನ ಕೂನೂರ್‌ನ ಅಪಘಾತದ ಸ್ಥಳದಿಂದ ಹೆಲಿಕಾಪ್ಟರ್‌ನ ಬ್ಲ್ಯಾಕ್‌ ಬಾಕ್ಸ್‌ ಗುರುವಾರ ಶೋಧನಾ ತಂಡಕ್ಕೆ ಸಿಕ್ಕಿದೆ. ಅದುವೇ ಈಗ ಪ್ರಧಾನ ಮಾಹಿತಿ ಆಶ್ರಯವಾಗಿ ಇರಲಿದೆ.  ಘಟನೆ ಹೇಗಾ, ಪೈಲಟ್‌ ಯಾವ ರೀತಿ ಯಾಗಿ ಅಲ್ಲಿ ಮಾತನಾಡಿಕೊಂಡಿದ್ದರು ಸೇರಿದಂತೆ ಹಲವು ವಿಚಾರ ಗಳು ಅದರಲ್ಲಿ ದಾಖಲಾಗಿರುತ್ತವೆ. ಮತ್ತೆ ಅದು ಯಾವ ಕಾರಣಕ್ಕಾಗಿ  ನಾಶವಾಗದೆ ಉಳಿಯುತ್ತದೆ ಎಂಬ ವಿಚಾರದ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಬ್ಲ್ಯಾಕ್‌ ಬಾಕ್ಸ್‌ ಎಂದರೇನು? :

ಅದಕ್ಕೆ ಹೆಸರು ಮಾತ್ರ ಬ್ಲ್ಯಾಕ್‌ ಬಾಕ್ಸ್‌. ಆದರೆ ಅದರ ಬಣ್ಣ ಕಪ್ಪು ಆಗಿರುವುದಿಲ್ಲ ಎನ್ನುವುದು ಗಮನಾರ್ಹ. ಅದು ಕಿತ್ತಳೆ ವರ್ಣದಲ್ಲಿಯೇ ಇರುತ್ತದೆ. ಆಸ್ಟ್ರೇಲಿಯದ ವಿಜ್ಞಾನಿ ಡೇವಿಡ್‌ ವಾರೆನ್‌ ಅವರು 1950ರಲ್ಲಿ ವಿಮಾನ ದುರಂತ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇಂಥ ವ್ಯವಸ್ಥೆಯನ್ನು ರೂಪಿಸಿದರು. ಅದರಲ್ಲಿ ಎರಡು ವಿಭಾಗಗಳು ಇರುತ್ತವೆ. ಕಾಕ್‌ಪಿಟ್‌ ವಾಯ್ಸ ರೆಕಾರ್ಡರ್‌ (ಸಿವಿಆರ್‌) ಮತ್ತು ಫ್ಲೈಟ್‌ ಡೇಟಾ ರೆಕಾರ್ಡರ್‌. ಮೊದಲ ವಿಭಾಗದಲ್ಲಿ ಕಾಕ್‌ಪಿಟ್‌ ಅಂದರೆ ಪೈಲಟ್‌ಗಳು ಮಾತನಾಡಿಕೊಂಡ ವಿವರಗಳು, ಸಂಭಾಷಣೆಗಳು ದಾಖಲಾಗಿರುತ್ತವೆ. ಎರಡನೇ ವಿಭಾಗದಲ್ಲಿ  ಪ್ರಯಾಣಿಕರು ಇರುವಲ್ಲಿ ಆಗಿದ್ದ ಸಂಭಾಷಣೆ, ಬೆಳವಣಿಗೆಗಳು ಸಂಬಂಧಿತ ವಿವರಗಳು ದಾಖಲಾಗಿರುತ್ತವೆ.

ಅದು ಕೆಲಸ ಹೇಗೆ ಮಾಡುತ್ತದೆ? :

  • ಅದನ್ನು ದುರಂತ ಸ್ಥಳದಿಂದ ಪತ್ತೆ ಮಾಡಿದ ಬಳಿಕ ತರಬೇತಿ ಪಡೆದ ತಂತ್ರಜ್ಞರು ಅದರಲ್ಲಿ ದಾಖಲಾಗಿರುವ ಮಾಹಿತಿಯ ಅಧ್ಯಯನ ಮಾಡುತ್ತಾರೆ.
  • ಅದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿದ ಬಳಿಕ ಅದನ್ನು ಕಾಪಿ ಮಾಡಲಾಗುತ್ತದೆ. ಅದರಲ್ಲಿರುವ ಮಾಹಿತಿ ವಿಶ್ಲೇಷಣೆಗೆ ಪರಿಣತರು ತೊಡಗುತ್ತಾರೆ. ತನಿಖೆ ನಡೆಸುವ ಪ್ರಧಾನ ಅಧಿಕಾರಿಗಳು ಮಾತ್ರ ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲು ಅವಕಾಶ ಇರುತ್ತದೆ. ಕೆಲವೊಂದು ಘಟನೆಗಳಲ್ಲಿ ಮಾತ್ರ ಬೆರಳೆಣಿಕೆಯ ಅವಧಿಯಲ್ಲಿ ಕನಿಷ್ಠ ಮಾಹಿತಿ ದಾಖಲಾಗಿರುವುದನ್ನು ದೃಢಪಡಿಸಲಾಗುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ ಮಾಹಿತಿ ಪಡೆಯಲು ವರ್ಷಗಳ ಕಾಲ ಕಾಯಬೇಕಾಗುತ್ತದೆ.

ಬ್ಲ್ಯಾಕ್‌ಬಾಕ್ಸ್‌ ನಾಶವಾಗದೇ ಉಳಿಯುವುದು ಹೇಗೆ? :

  • ಬ್ಲ್ಯಾಕ್‌ ಬಾಕ್ಸ್‌ ಸರಿ ಸುಮಾರು 4.5 ಕೆಜಿ ತೂಕ ಇರುತ್ತದೆ.
  • ಅದರಲ್ಲಿ ಚಾಸಿಸ್‌, ನೀರಿನೊಳಗೆ ಮಿನುಗುವ ದೀಪ, ಅಪಘಾತವನ್ನು ತಾಳಿಕೊಳ್ಳುವ ಮೆಮೊರಿ ಯುನಿಟ್‌ ಇರುತ್ತದೆ.
  • ಚಾಸಿಸ್‌ನಲ್ಲಿ ವಿಮಾನದ ಒಳಗಿನ ಪ್ರತಿಯೊಂದು ಅಂಶವೂ ರೆಕಾರ್ಡ್‌ ಆಗಿ ಮತ್ತು ಅದನ್ನು ಪಡೆಯುವಂಥ ವ್ಯವಸ್ಥೆ ಕಲ್ಪಿಸಲಾಗುತ್ತದೆ.
  • ನೀರಿನೊಳಗೆ ಮಿನುಗುವ ದೀಪದಿಂದಾಗಿ, ವಿಮಾನ ಸಮುದ್ರ ವ್ಯಾಪ್ತಿಯಲ್ಲಿ ಪತನವಾದರೆ ಕಂಡು ಹಿಡಿಯಲು ನೆರವಾಗುತ್ತದೆ.
  • ಪ್ರಧಾನ ಅಂಶವಾಗಿರುವ ಅಪಘಾತ ತಾಳಿಕೊಳ್ಳುವ ಮೆಮೊರಿ ಯುನಿಟ್‌ನಲ್ಲಿ ಚಿಪ್‌ಗ್ಳಿಂದ ಕೂಡಿದ ಸರ್ಕಿಟ್‌ ಬೋರ್ಡ್‌ ಇರುತ್ತದೆ. ಅದನ್ನು ಯಾವುದೇ ರೀತಿಯ ಆಘಾತವನ್ನು ತಾಳಿಕೊಳ್ಳುವ ಸಾಮರ್ಥ್ಯ ಇರುವ ಸ್ಟೈನ್‌ಲೆಸ್‌ ಸ್ಟೀಲ್‌ನಿಂದ ರಚನೆ ಮಾಡಲಾಗುತ್ತದೆ. ಹೀಗಾಗಿ ಅದು ನೀರು, ಬೆಂಕಿಯಿಂದ ರಕ್ಷಣೆ ಪಡೆಯುವಂತೆ ಸಿದ್ಧಪಡಿಸಲಾಗಿರುತ್ತದೆ. ಹೀಗಾಗಿ ಎಂಥ ಭೀಕರ ಅಪಘಾತವಾದಾಗಲೂ ಬ್ಲ್ಯಾಕ್‌ ಬಾಕ್ಸ್‌ ಉಳಿಯುತ್ತದೆ.
  • ಸರ್ಕಿಟ್‌ ಬೋರ್ಡ್‌ ಅನ್ನು ಅಲ್ಯುಮಿನಿಯಂನಿಂದ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಅದು ತುಕ್ಕು ಹಿಡಿಯದಂ ತೆಯೂ ಇರಲು ನೆರವಾಗುತ್ತದೆ. ಅದು 2, 030 ಡಿಗ್ರಿ ಫ್ಯಾರನ್‌ಹೀಟ್‌ ವರೆಗಿನ ತಾಪವನ್ನು ತಾಳಿಕೊಳ್ಳುವಷ್ಟು ಅಂದರೆ ಒಂದು ಇಂಚು ದಪ್ಪ ಇರುವಂತೆ ರಕ್ಷಣ ಕವಚ ನಿರ್ಮಿಸಲಾಗುತ್ತದೆ. ಹೀಗಾಗಿ, ವಿಮಾನ ಸ್ಫೋಟಗೊಂಡು ಉರಿದುಹೋಗುವಂಥ ದುರಂತ ಉಂಟಾದರೂ ಬ್ಲ್ಯಾಕ್‌ಬಾಕ್ಸ್‌ಗೆ ಹಾನಿಯಾಗದೇ ಇರುತ್ತದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next