Advertisement
ಸಂತೋಷ್ ಭೇಟಿ ಬೆನ್ನಲ್ಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಸಿಎಂ ಅವರನ್ನು ಭೇಟಿ ಯಾಗಿ ಚರ್ಚಿಸಿದ್ದು, ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಸಂಪುಟ ವಿಸ್ತರಣೆಯೋ ಪುನಾರಚನೆಯೋ ಅಥ ವಾ ಕೇವಲ ಗ್ರಾ.ಪಂ. ಚುನಾವಣ ಸಿದ್ಧತಾ ವಿಚಾರವೋ ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಉಭಯ ನಾಯಕರು ಭೇಟಿ ಬಗ್ಗೆ ತುಟಿ ಬಿಚ್ಚದಿರುವುದನ್ನು ನೋಡಿದರೆ, ತತ್‌ಕ್ಷಣಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ ಕ್ಷೀಣಿಸಿದೆ ಎನ್ನಬಹುದು.
Related Articles
Advertisement
ಖಾಸಗಿ ಕಾರ್ಯಕ್ಕಾಗಿ ದಿಲ್ಲಿಗೆ: ವಿಜಯೇಂದ್ರಖಾಸಗಿ ಕಾರಣಕ್ಕಾಗಿ ದಿಲ್ಲಿಗೆ ಹೋಗಿದ್ದೆ, ರಾಜಕಾರಣದ ವಿಷಯಕ್ಕಲ್ಲ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿ ದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಸಿಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾರೆ. ವರಿಷ್ಠರು ತಿಳಿಸಿದಾಗ ಸಿಎಂ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನಷ್ಟು ವಿಳಂಬ?
ಸಂಪುಟ ವಿಸ್ತರಣೆ -ಪುನಾರಚನೆ ಗೊಂದಲ ಮುಂದುವರಿದಿದೆ. ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರ ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕ ಸಭಾ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಡಿ. 7ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಹಾಗಾಗಿ ವಾರಾಂತ್ಯದೊಳಗೆ ಸಂಪುಟ ಕಸರತ್ತಿಗೆ ಚಾಲನೆ ಸಿಗದಿದ್ದರೆ ವಿಳಂಬವಾಗುವ ಸಾಧ್ಯತೆ ಅಧಿಕ.