ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಟೀಕೆ ಮಾಡಿದ್ದಾರೆ.
ಗೃಹ ಸಚಿವ ಅರೆ ಪ್ರಜ್ಞೆ ಜ್ಙಾನೇಂದ್ರ..ಅವರಿಗೆ ಹೆಂಡ ಕುಡಿಯುವ ಅಥವಾ ಗಾಂಜಾ ಹೊಡೆಯುವ ಅಭ್ಯಾಸ ಇರಬೇಕು. ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.
ಇಂತಹವರೆಲ್ಲ ನಮ್ಮ ಗೃಹ ಸಚಿವರು ಆಗಿರುವುದು ದೌರ್ಭಾಗ್ಯ.ಹಿಂದೂ ಬೇರೆ ಹಿಂದುತ್ವ ಬೇರೆ. ಹಿಂದುತ್ವ ಅಂದರೆ ಹಿಂಸೆ ಮತ್ತು ದೌರ್ಜನ್ಯ ಅನ್ನುವುದನ್ನ ತಿಳಿದುಕೊಳ್ಳಿ ಎಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿದರು.
ಸ್ವಾಮಿ ವಿವೇಕಾನಂದ , ಇಂದಿರಾಗಾಂಧಿ ಇವರೆಲ್ಲ ಹಿಂದೂ ಆಗಿದ್ದರು.ಸಹಿಷ್ಣು ತೆಯೇ ಹಿಂದೂ ಧರ್ಮ .ಆದರೆ ಗೋಲ್ವಾಲ್ಕರ್ ಆಗಲಿ ಸಾವರ್ಕರ್ ಆಗಲಿ ಹಿಂದೂ ಧರ್ಮ ಅನುಸರಿಸಿಲ್ಲ ಎಂದು ಟೀಕಿಸಿದರು.
ಧಾರವಾಡದಲ್ಲಿ ಬಡ ವ್ಯಾಪಾರಕ್ಕೆ ಅಡ್ಡಿ ಮಾಡಿದ್ದಾರೆ. ಇದೇ ಮುತಾಲಿಕ್ ಈದ್ಗಾ ಮೈದಾನ ಗಲಾಟೆ ಮಾಡಿದ್ದರು. ಇದರ ಲಾಭ ಪ್ರಹ್ಲಾದ ಜೋಶಿ ಪಡೆದು ಕೇಂದ್ರ ಮಂತ್ರಿ ಆಗಿದ್ದಾರೆ. ಮುತಾಲಿಕ್ ಗೆ ಯಾವ ಸ್ಥಾನ ಸಿಗಲಿಲ್ಲ.ಬೆಂಕಿ ಹಚ್ಚುವ ಕೆಲಸ ಮಾಡಬೇಡಿ.ಇದೆ ಬಿಜೆಪಿ ನಿಮ್ಮನ್ನು ಜೈಲಿಗೆ ಕಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.