Advertisement

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ನಡಹಳ್ಳಿ

05:11 PM Oct 14, 2021 | Shwetha M |

 ದೇವರಹಿಪ್ಪರಗಿ: ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದ್ದು ಬಿಜೆಪಿ ಗೆಲುವಿಗೆ ಸಹಕಾರ ನೀಡಬೇಕು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಬುಧವಾರ ಸಿಂದಗಿ ಮತಕ್ಷೇತ್ರದ ಗುಬ್ಬೇವಾಡ, ಮಾಡಬಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಆಕಸ್ಮಿಕವಾಗಿ ಬಂದಿರುವ ಉಪಚುನಾವಣೆಯಲ್ಲಿ ಸಿಂದಗಿ ಹಾಗೂ ಹಾನಗಲ್‌ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದರು.

ನಮ್ಮ ಪಕ್ಷದಲ್ಲಿ ಯುವ ಕಾರ್ಯಪಡೆ ಅತ್ಯಂತ ಉತ್ತಮ ರೀತಿಯಲ್ಲಿ, ಕೆಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತ ಪಕ್ಷ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ಬೂತ್‌ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆದು ಗೆಲುವಿಗೆ ಸಹಕಾರ ನೀಡಲಾಗುತ್ತಿದೆ.

ರಮೇಶ ಭೂಸನೂರ ಅವರು, ಕ್ಷೇತ್ರದಾದ್ಯಂತ ಮಾಡಿದ ಸಾಧನೆಗಳು, ಅವರ ಸರಳ ವ್ಯಕ್ತಿತ್ವ, ಸಭ್ಯ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಎಲ್ಲ ಸಮಾಜದವರನ್ನು ಕರೆದುಕೊಂಡು ಹೋಗುವ ಮನೋಭಾವ ಹೊಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಕೇಂದ್ರದಲ್ಲಿ ಮೋದಿ ಸರಕಾರ, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಜನಪರ ಯೋಜನೆಗಳೂ ಉಪಚುನಾವಣೆ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಉಪಚುನಾವಣೆ ಯಾವುದೇ ಚುನಾವಣೆಗೆ ದಿಕ್ಸೂಚಿಯಲ್ಲ. ಖಂಡಿತವಾಗಲು ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಗುಬ್ಬೇವಾಡ, ಖಾನಾಪುರ, ಮಾಡಬಾಳ, ಬನ್ನೆಟ್ಟಿ ಪಿಎ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಮನೆ ಮನೆಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಕೂಡಿ ಮತಯಾಚಿಸಿದರು. ಚುನಾವಣಾ ತಂತ್ರಗಳನ್ನು ರಚಿಸಿ ಪ್ರತಿ ಬೂತ್‌ ಮಟ್ಟದಲ್ಲಿ ಬಿಜೆಪಿ ಮತಗಳು ಹೆಚ್ಚಿಗೆ ಬರುವಂತೆ ನೋಡಿಕೊಳ್ಳಲು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

Advertisement

ಈ ಸಂದರ್ಭದಲ್ಲಿ ಗುಬ್ಬೆವಾಡದ ಮುಖಂಡರಾದ ಸುರೇಶ ಮಳಲಿ, ಭೀಮಣ್ಣ ಕರಭಂಟನಾಳ, ರಮೇಶ ದೊಡ್ಡಮನಿ, ಮುತ್ತು ಹರನಾಳ, ನಾನಾಗೌಡ ಬಿರಾದಾರ, ಖಾನಾಪುರದ ಶರಣಗೌಡ ಬಿರಾದಾರ, ಗುತ್ತಪ್ಪಗೌಡ ಅಸಮತಾಪುರ, ಶಂಕರಗೌಡ ಬೋನಾಳ, ಬಸನಗೌಡ ಪಾಟೀಲ, ಶಂಕರ ಕೆಂಚಗೊಂಡ, ಮಡಿವಾಳಪ್ಪಗೌಡ ಕೋಟಿಖಾನಿ, ಜಗನ್ನಾಥ ನಾಯ್ಕೋಡಿ, ಸಂಗನಗೌಡ ಪಾಟೀಲ, ಮಹಿಬೂಬ ಪಟೇಲ್‌, ಅರ್ಜುನ ರೆಬಿನಾಳ, ನಿಂಗಣ್ಣ ಇಜೇರಿ, ಸೋಮು ಸಿಂದಗಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next