ಚೆನ್ನೈ/ಹೊಸದಿಲ್ಲಿ: ತಮಿಳು ನಾಡು ಪ್ರವಾಸ ಸಂದರ್ಭ ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈಚೆಗೆ ತಿರುಚಿರಾಪಳ್ಳಿಯಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಇದ್ದರು. ವಿಮಾನದ ಸಿಬಂದಿ ತುರ್ತು ಪರಿಸ್ಥಿತಿ ನಿರ್ವಹಣೆಯ ವಿವರಣೆ ನೀಡುವ ಸಂದರ್ಭದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆಯುವ ಬಗ್ಗೆ ಕೂಡ ಪ್ರಸ್ತಾವ ಮಾಡಿದ್ದರು.
ಈ ಸಂದರ್ಭ ತೇಜಸ್ವಿ ಸೂರ್ಯ ಎಮರ್ಜೆನ್ಸಿ ಎಕ್ಸಿಟ್ ತೆರೆದಿ ದ್ದಾರೆ ಎನ್ನಲಾಗಿದೆ. ಆದರೆ ಜತೆಗಿದ್ದ ಬಿಜೆಪಿ ಮುಖಂಡರು ಹೇಳುವ ಪ್ರಕಾರ ಸೂರ್ಯ ಕುಳಿತಿದ್ದ ಸೀಟ್ ಪಕ್ಕ ಎಮರ್ಜೆನ್ಸಿ ಎಕ್ಸಿಟ್ ಇತ್ತು. ಅದರ ಹ್ಯಾಂಡಲ್‌ಗೆ ಕೈ ತಾಗಿದ್ದರಿಂದ ಅದು ತೆರೆದಿದೆ. ಕೂಡಲೇ ಈ ಬಗ್ಗೆ ಸಿಬಂದಿಯ ಗಮನ ಸೆಳೆದರು ಎಂದು ಅವರು ತಿಳಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸಿಐಎಸ್‌ಎಫ್ ಅಧಿಕಾರಿ ಗಳು ಮತ್ತು ಸಿಬಂದಿ ವಿಮಾನದ ಸಮೀಪಕ್ಕೆ ಧಾವಿಸಿದರು. ಎಮರ್ಜೆನ್ಸಿ ಎಕ್ಸಿಟ್ ಮುಚ್ಚಿ, ವಿವಿಧ ಔಪಚಾರಿಕ ತಪಾಸಣೆಗಳನ್ನು ನಡೆಸಿ ಎರಡು ತಾಸುಗಳ ಬಳಿಕ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ಮೂಲಗಳ ಪ್ರಕಾರ ಸುರಕ್ಷೆಯ ನಿಯಮ ಉಲ್ಲಂ ಸಿದ್ದಕ್ಕಾಗಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಲಿಖೀತವಾಗಿ ಕ್ಷಮೆ ಯಾಚಿಸುವಂತೆ ಸೂಚಿಸಲಾಗಿದೆ.
ಅದರಂತೆ ಅವರು ನಡೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮ ಗಳಲ್ಲಿ ವರದಿಯಾಗಿದೆ. ಈ ಘಟನೆ ಬಗ್ಗೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ ವಿಮಾನಯಾನ ಸಂಸ್ಥೆ ಸಂಸದ ತೇಜಸ್ವಿಗಾಗಿ ಪ್ರಯಾಣಿಕರ ಸುರಕ್ಷೆಯಲ್ಲಿ ರಾಜಿ ಮಾಡಿಕೊಂಡಿತೇ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಈ ವಿಚಾರವನ್ನು ಕೇಂದ್ರ ಸರಕಾರ ಮುಚ್ಚಿಟ್ಟಿದ್ದೇಕೆ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದೆ.