Advertisement
ಕಾಂಗ್ರೆಸ್ ಭ್ರಷ್ಟಾಚಾರ ಮಾಡಿಲ್ಲವೇ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವು ಮಾಡಿದರೆ ಆರೋಪ ಮಾಡಬಹುದಿತ್ತು. ಆಗ ಇವರು ಸುಮ್ಮನಿದ್ದಿದ್ದು ಯಾಕೆ? ಸುಮ್ಮನಿರುವುದು ಅಪರಾಧವಲ್ಲವೇ? ಮೂರು ವರ್ಷ ಆಯ್ತು ತನಿಖೆ ಮಾಡಬಹುದಿತ್ತಲ್ಲಾ? ಯಾಕೆ ಯಾವ ತನಿಖೆ ಮಾಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರದ ಆರೋಪ ಬರುತ್ತಿಲ್ಲವೇ? ಬಿ.ಸಿ.ಪಾಟೀಲ್ ಆಪರೇಷನ್ ಗೆ ಹೋದವರಲ್ಲವೇ? ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ಅಶ್ವತ್ಥ್ ನಾರಾಯಣ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಮಗಳು, ನನ್ನಮಗ ಸ್ನೇಹಿತರು. ಹಾಗಾಗಿ ಭೇಟಿ ಮಾಡುವುದು ಸ್ವಾಭಾವಿಕ. ಅವರನ್ನು ನಾನು ಭೇಟಿ ಮಾಡಲ್ಲ ಅಂತ ಏನೂ ಇಲ್ಲ. ಅವರನ್ನು ನಾನು ಭೇಟಿ ಮಾಡಿಲ್ಲ. ಭೇಟಿ ಮಾಡಬಾರದು ಅಂತ ಏನೂ ಇಲ್ಲ. ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಅವರು ಮತ್ತೊಂದು ಪಕ್ಷದ ಸೀನಿಯರ್ ಲೀಡರ್ ಇದ್ದಾರೆ. ಎಂಜಿನಿಯರಿಂಗ್ ಪ್ರೋಗ್ರಾಂ ಇತ್ತು. ಅಲ್ಲಿಗೆ ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಲಿಲ್ಲ. ಅಶ್ವತ್ಥ ನಾರಾಯಣ್ ಭೇಟಿ ನಿನ್ನೆ ಆಗಿಲ್ಲ ಎಂದರು.