Advertisement

ತಲೆ ಕಡಿಯುತ್ತೇನೆ ಎನ್ನುತ್ತಾರೆ: ನಲಪಾಡ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್

02:37 PM Feb 11, 2022 | Team Udayavani |

ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಮೊಹಮ್ಮದ್ ನಲಪಾಡ್
ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

Advertisement

2018ರಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡವರಿಗೆ ಸ್ಥಾನ. 6 ವರ್ಷ ಕಾಲ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಕೇವಲ 4 ವರ್ಷಗಳಲ್ಲಿ ಅವರೇ ಯುವ ಕಾಂಗ್ರೆಸ್ ಅಧ್ಯಕ್ಷ, ಎಂತಹ ವೈಚಿತ್ರ್ಯವಿದು!? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇನ್ನೊಂದು ಟ್ವೀಟ್ ನಲ್ಲಿ ಕೊಲೆ ಯತ್ನ, ಕ್ರಿಮಿನಲ್‌ ಬೆದರಿಕೆ, ಅಕ್ರಮ ಗುಂಪುಗೂಡೋದು. ಯುವ ಕಾಂಗ್ರೆಸ್‌ ಅಧ್ಯಕ್ಷರಾಗಲು ಇದೇ ಅರ್ಹತೆಯೇ!? ಎಂದು ಪ್ರಶ್ನಿಸಿದೆ.

ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ. ಮತ್ತೊಬ್ಬರ ಕಾಲು ಮುರಿಯುತ್ತಾರೆ. ಮಗದೊಮ್ಮೆ ಅಮಾಯಕರ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್‌ ಅಧ್ಯಕ್ಷ!!! ದೇಶಕ್ಕೆ ಕಾಂಗ್ರೆಸ್ ಯಾವ ಸಂದೇಶ ನೀಡುತ್ತಿದೆ!? #Anti Social Karnataka Congress ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಗುರುವಿಗೆ ತಕ್ಕ ಶಿಷ್ಯ ಎಂದು ಬಿಜೆಪಿ ಲೇವಡಿ ಮಾಡಿ ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ‘ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next