Advertisement

ಬಿಜೆಪಿ ಸಾಧನೆ ಮನೆ-ಮನೆಗೆ ತಲುಪಿಸಿ: ನಾಗರತ್ನ

01:10 PM Aug 28, 2017 | Team Udayavani |

ರಾಯಚೂರು: ಬಿಜೆಪಿ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ, ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ ವಿಸ್ತಾರಕರಲ್ಲಿ ರಾಯಚೂರು ಜಿಲ್ಲೆಗೆ ಎರಡನೇ ಸ್ಥಾನ ಸಿಕ್ಕಿದೆ. ಈ ಉತ್ಸಾಹ ಇಲ್ಲಿಗೆ ನಿಲ್ಲದೆ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗೂ
ಮುಂದುವರಿಯಬೇಕು ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಎಲ್ಲ ಕಾರ್ಯಕರ್ತರಿಗೆ ಉತ್ತಮ ಹೊಣೆಗಾರಿಕೆ ವಹಿಸಿದ್ದು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಂತೆ ಕರೆ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅಮಿತ್‌ ಷಾ ಬಂದರೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯರಿಗೆ ಅಮಿತ್‌ ಶಾ
ಏನು ಮಾಡಬಲ್ಲರು ಎಂಬುದು ಗೊತ್ತಾಗಲಿದೆ ಎಂದರು. ಈಚೆಗೆ ನಡೆದ ಸಭೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷರು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಈ ಸಭೆ ಮುಗಿಯಿತು ಎಂದು ಕೂರುವಂತಿಲ್ಲ. ಪಕ್ಷದಲ್ಲಿ ಒಂದಲ್ಲ ಒಂದು ಚಟುವಟಿಕೆ ನಡೆಯುತ್ತಲೇ ಇರಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ
ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೆ ವಿರಮಿಸದೆ ಪಕ್ಷವನ್ನು ಅಧಿ ಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು. ಮಿಶನ್‌ 150 ಗುರಿಗೆ ಜಿಲ್ಲೆಯ ಏಳರಲ್ಲಿ ಕನಿಷ್ಠ ಐದರಿಂದ ಆರು
ಕ್ಷೇತ್ರಗಳಲ್ಲಾದರೂ ಬಿಜೆಪಿ ಗೆಲ್ಲಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ, ಈ ಬಾರಿ ಬಿಜೆಪಿ ಸಾಕಷ್ಟು ತಯಾರಿ ಮಾಡಿಕೊಂಡು ಚುನಾವಣೆಗೆ ಮುಂದಾಗುತ್ತಿದೆ. ರಾಜ್ಯದಲ್ಲಿ 3.5 ಕೋಟಿ ಜನ ಮತದಾರರಿದ್ದು, ಅದರಲ್ಲಿ ಕನಿಷ್ಠ ಒಂದೂವರೆ
ಕೋಟಿಯಷ್ಟು ಮತಗಳು ಪಡೆದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಶ್ರಮಿಸಬೇಕು. ಬಿಜೆಪಿ ಮಿಶನ್‌ 150 ಗುರಿಗೆ ಪೂರಕವಾಗಿ ಜಿಲ್ಲೆಯಲ್ಲಿ ಮಿಶನ್‌ 7 ಜಾರಿಗೊಳಿಸಬೇಕು ಎಂದರು. ಈ ಬಾರಿ 224 ವಿಧಾನಸಭೆ ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ಎಂದು
ವಿಂಗಡಿಸಲಾಗಿದೆ. ಎ ವಿಭಾಗದಲ್ಲಿ ಸಂಪೂರ್ಣ ಬಿಜೆಪಿ ಅಧಿಕಾರಕ್ಕೆ ಬರುವ ಕ್ಷೇತ್ರಗಳಿವೆ. ಬಿ ನಲ್ಲಿ ಅರ್ಧ ಮಾತ್ರ ಬೆಂಬಲವಿದ್ದರೆ ಸಿ ವಿಭಾಗದಲ್ಲಿ ಬಿಜೆಪಿಗೆ ಒಲವಿಲ್ಲ. ಹೀಗಾಗಿ ಕಾರ್ಯಕರ್ತರು ಬಿ ಮತ್ತು ಸಿ ವಿಭಾಗದಲ್ಲಿ ಹೆಚ್ಚು ಒತ್ತು ಕೊಟ್ಟು ಶ್ರಮಿಸಬೇಕು. ಇನ್ನೂ ಕಾರ್ಯಕರ್ತರಿಗೆ ಕ್ಷೇತ್ರಗಳ
ವಿಂಗಡಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಮೃತ್ಯುಂಜಯ ಜಿನಗಾ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಪ್ರಧಾನ ಕಾರ್ಯದರ್ಶಿ ಎನ್‌. ಶಂಕ್ರಪ್ಪ, ಶಾಸಕ ತಿಪ್ಪರಾಜ ಹವಾಲ್ದಾರ, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್‌, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಯೀ ಪರಮೇಶಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next