Advertisement

45 ಸಾವಿರ ಕ್ವಿಂಟಲ್‌ ಅಕ್ಕಿಯನ್ನು ಯಾರಿಗೆ ಮಾರಿದಿರಿ?

06:10 AM Jan 07, 2018 | Team Udayavani |

ಸಂಡೂರು: “ರಾಜ್ಯದ ಜನರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯನವರೇ, 45 ಸಾವಿರ ಕ್ವಿಂಟಲ್‌ ಅಕ್ಕಿ ಅಕ್ರಮವಾಗಿ ಸಾಗಾಟವಾಗಿದೆ. ಇದನ್ನು ಯಾರಿಗೆ ಮಾರಿದಿರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

Advertisement

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶನಿವಾರ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಗೋದಾಮುಗಳಲ್ಲಿ 40 ಸಾವಿರ ಕ್ವಿಂಟಲ್‌ ಅಕ್ಕಿ ಕೊಳೆಯುತ್ತಿದೆ. 45 ಸಾವಿರ ಕ್ವಿಂಟಲ್‌ ಅಕ್ಕಿ ಅಕ್ರಮವಾಗಿ ಸಾಗಾಟವಾಗಿದೆ. ಹಾಗಾದರೆ ಇದನ್ನು ಯಾರಿಗೆ ಮಾರಿದಿರಿ’ ಎಂದು ಪ್ರಶ್ನಿಸಿದರು. “ಕೇಂದ್ರ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ 32 ರೂ., ಗೋಧಿಗೆ  26ರೂ. ನೀಡುತ್ತಿದೆ. ಬಡವರಿಗೆ ಅಕ್ಕಿ, ಗೋಧಿ ಸಮರ್ಪಕವಾಗಿ ವಿತರಿಸದೆ ಗೋದಾಮುಗಳಲ್ಲಿ ಕೊಳೆಸುತ್ತಿದ್ದೀರಿ’ ಎಂದು ಆರೋಪಿಸಿದರು.

“ನಾನು ಸಿಎಂ ಆಗಿದ್ದಾಗ ಪ್ರಥಮ ಕೃಷಿ ಬಜೆಟ್‌ ನೀಡಿದೆ. ಉಚಿತ ವಿದ್ಯುತ್‌ ನೀಡಿದೆ. ಸಾಲಮನ್ನಾ ಮಾಡಿದೆ. ಭಾಗ್ಯಲಕ್ಷೀ¾ ಬಾಂಡ್‌ ಜಾರಿಗೆ ತಂದು ಹೆಣ್ಣು ಮಕ್ಕಳಿಗೆ ಶಾಶ್ವತ ಪರಿಹಾರ ನೀಡಿದೆ. ನನಗೆ ಜಾತಿ ಗೊತ್ತಿಲ್ಲ, ಸರ್ವ ಜನಾಂಗದ ತೋಟವಾಗಬೇಕು ಎನ್ನುವ ಗುರಿ ನಮ್ಮದು. ಬಂಜಾರ ಸಮಾಜಕ್ಕೆ ನಿಗಮ ಸ್ಥಾಪಿಸಿದೆವು. ವಾಲ್ಮೀಕಿ ಜಯಂತಿ, ಭವನ ಕಟ್ಟಿಸಿದೆವು. ಕುರುಬರ ಸಮಾಜದ ಕನಕ ಪೀಠಕ್ಕೆ 40 ಕೋಟಿ ರೂ. ಅನುದಾನ ನೀಡಿದೆವು’ ಎಂದರು.

“ರಾಚಯ್ಯನವರು ಜಾರಿಗೆ ತರಲು ಹೊರಟ ರೈತರ ಹಕ್ಕು ಕಸಿದುಕೊಳ್ಳುವ ಕಾನೂನು ವಿರುದ್ಧ ಏಕಾಂಗಿಯಾಗಿ ಹೋರಾಡಿದವನು ಯಡಿಯೂರಪ್ಪ. ಆ ಬಿಲ್‌ ತಡೆ ಹಿಡಿದವನು ಯಡಿಯೂರಪ್ಪ. ನೀವು ಹೆದರಬೇಡಿ ನಿಮಗೆ ಹಕ್ಕು ಪತ್ರ ನೀಡುತ್ತೇವೆ. 20 ವರ್ಷ ಮೋದಿಯವರನ‌ು° ಯಾರೂ ಅಲುಗಾಡಿಸಲಾರರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next