Advertisement

ರೆಸಾರ್ಟ್‌ನಲ್ಲಿ ಬಿಜೆಪಿ ಹೊಸ ರಾಜಕೀಯ

01:24 AM Jan 21, 2021 | Team Udayavani |

ಬೆಂಗಳೂರು: “ರೆಸಾರ್ಟ್‌ ರಾಜಕೀಯ’ ಋಣಾತ್ಮಕ ಕಾರಣ ಗಳಿಗೆ ಪ್ರಸಿದ್ಧ. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ವಿಶೇಷ ಕಾರ್ಯಕ್ರಮದ ಮೂಲಕ ತಾನು ಭಿನ್ನ ಎಂದು ತೋರಿಸಿಕೊಟ್ಟಿದೆ.

Advertisement

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಈ ಚಟುವಟಿಕೆಗಳ ನಾಯಕತ್ವ ವಹಿಸಿದ್ದರು. ಆಟಗಳು, ಕಥೆ ಹೇಳು ವುದು, ಪ್ರತಿಭಾ ಪ್ರದರ್ಶನ ಇತ್ಯಾದಿ ಚಟುವಟಿಕೆಗಳ ಮೂಲಕ ಬಿಜೆಪಿ ಪದಾಧಿಕಾರಿಗಳು ಹೊಸ ಚೈತನ್ಯ ಮೈಗೂಡಿಸಿಕೊಂಡಿದ್ದಾರೆ.

ನಳಿನ್‌ ನಾಯಕತ್ವ :

ನಳಿನ್‌ ನೇತೃತ್ವದಲ್ಲಿ ಸುಮಾರು 29 ರಾಜ್ಯ ಪದಾಧಿಕಾರಿಗಳು ಮಂಗಳವಾರ ಸಂಜೆ ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ಗೆ ತೆರಳಿ ಆಟಗಳ ಮೂಲಕ ಪುನಶ್ಚೇತನಗೊಳ್ಳುವ ಪ್ರಯತ್ನ ಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ “ಸಹಲ್‌’ ಎಂದು ಹೆಸರಿಡಲಾಗಿತ್ತು. ಪಕ್ಷದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಇರುವ ಔಪಚಾರಿಕ ಚರ್ಚೆ, ಭಾಷಣ ಯಾವುದೂ ಇಲ್ಲದೆ ತಂಡ ಕಟ್ಟುವ, ವಿಶ್ವಾಸ ಬೆಳೆಸುವ, ಒಗ್ಗಟ್ಟು ಮೂಡಿಸುವ ಆಟಗಳನ್ನು ಈ ನಾಯಕರು ಆಡಿದ್ದಾರೆ.

Advertisement

ನಾವು ಒಂದು ದಿನ ರಾಜಕೀಯ ಇಲ್ಲದೆ ಆಟ, ಹರಟೆ ಮೂಲಕ ಕಾಲ ಕಳೆದಿದ್ದೇವೆ. ನಮ್ಮಲ್ಲಿ ವಿಶ್ವಾಸ, ನಂಬಿಕೆ ಆತ್ಮೀಯತೆ, ಸಂಘಟನೆ ಬಲಗೊಳಿಸುವ ಪಾಠವನ್ನು ಆಟಗಳ ಮೂಲಕ ಕಲಿತಿದ್ದೇವೆ.-ಕ್ಯಾ| ಗಣೇಶ್‌ ಕಾರ್ಣಿಕ್‌, ರಾಜ್ಯ ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next