Advertisement

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಭರ್ಜರಿ ರೋಡ್‌ ಶೋ

12:18 PM Apr 10, 2019 | keerthan |

ಶ್ರೀನಿವಾಸಪುರ: ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು, ದೇಶದ ರಕ್ಷಣೆ ಮತ್ತು ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡುವುದರೊಂದಿಗೆ ರೈತರ ಬೆನ್ನೆಲುಬಾಗಿ ಮೋದಿ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌. ಮುನಿಸ್ವಾಮಿ ಪರ ಭರ್ಜರಿ ರೋಡ್‌ ಶೋ ನಡೆಸಿದ ಅವರು, ಕಾಶ್ಮೀರಕ್ಕೆ ಪ್ರತ್ಯೇಕವಾಗಿ ರೂಪಿಸಿರುವ ಆರ್ಟಿಕಲ್‌ 370 ಹಾಗೂ 35 ಎ ಅನ್ನು ತೆಗೆಯುವ ಮೂಲಕ ಎಲ್ಲಾ ಧರ್ಮಿಯರು ಒಂದೇ ತಾಯಿ ಮಕ್ಕಳಂತೆ ಬಾಳಲು ಅನುಕೂಲ ಕಲ್ಪಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಮಾತ್ರ ಮೋದಿ ಮೋದಿ ಎಂಬ ಘೋಷಣೆ ಕೇಳುತ್ತಿದ್ದೆ, ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಮೋದಿ ನಾಮ ಸ್ಮರಣೆ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಎರಡನೇ ವ್ಯಕ್ತಿ ಮೋದಿ ಎಂದು ಹೇಳಿದರು.

ಶ್ರೀನಿವಾಸಪುರ ತಾಲೂಕಿನ ಪ್ರತಿಯೊಬ್ಬರ ಬಾಯಲ್ಲೂ ಮೋದಿ ಹೆಸರು ಕೇಳಿ ಸಂತಸವಾಗಿದೆ. ಇದರಿಂದ ದೇಶಕ್ಕೆ ಒಳ್ಳೆ ದಿನಗಳು ಬರುತ್ತವೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸುವುದರೊಂದಿಗೆ, ನನೆಗುದಿಗೆ
ಬಿದ್ದಿರುವ ಎತ್ತಿನ ಹೊಳೆ ಯೋಜನೆ ಕಾರ್ಯ ರೂಪಕ್ಕೆ ತರಲು ಯೋಜನೆ ರೂಪಸಿಲಾಗಿದೆ. ಹೇಮಾವತಿ, ಮೇಕೆದಾಟು, ಕೃಷ್ಣಾ ಹಾಗೂ ಮುಂತಾದ ನದಿ ಜೋಡಣೆಯಿಂದ ನೀರಿನ ಅಭಾವ ಎದುರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವ ವಿಚಾರಕ್ಕೆ ಕೇಂದ್ರ ಸಚಿವ ನಿತಿನ್‌ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ

ಎಂದು ಹೇಳಿದರು. ಮುಳಬಾಗಿಲು ಮಾಜಿ ಶಾಸಕ ಕೊತ್ತೂರ್‌ ಮಂಜುನಾಥ್‌ ಮಾತನಾಡಿ, ಕೋಲಾರದಲ್ಲಿ ನ್ಯಾಯ-ಅನ್ಯಾಯದ ಮಧ್ಯೆ ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಶಾಸಕರು ಜನತೆಗಾಗಿ ಅಭಿವೃದ್ಧಿ ಕೆಲಸಗಳನ್ನು
ಮಾಡಿದ್ದಾರೆ. ಆದರೆ, ಲೋಕಸಭೆ ಸದಸ್ಯರು ಏನು ಅಭಿವೃದ್ಧಿ ಮಾಡಿದ್ದಾರೆ. ನಾವು ನಿಷ್ಠಾವಂತರಾಗಿ ಜನರಿಗೆ ದುಡಿಯುವವರು. ನಮ್ಮನ್ನು ಸಂಸದ ಕೆ.ಎಚ್‌. ಮುನಿಯಪ್ಪ ಮುಗಿಸುತ್ತಿದ್ದಾರೆ. ಈಗ ಅದೇ ತಿರುಗುಬಾಣವಾಗಿದೆ ಎಂದು ಹೇಳಿದರು. ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಕೂಡ ಕೆಎಚ್‌ಎಂ ವಿರುದ್ಧ ವಾಗ್ಧಾಳಿ ನಡೆಸಿದರು. ಬಿಜೆಪಿ ಅಭ್ಯರ್ಥಿಎಸ್‌. ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ತಾಲೂಕು ಅಧ್ಯಕ್ಷ
ವೆಂಕಟೇಗೌಡ, ಮುಖಂಡರುಗಳಾದ ಎಸ್‌ಎಲ್‌ಎನ್‌ ಮಂಜುನಾಥ್‌, ಡಾ.ವೇಣುಗೋಪಾಲ್‌, ವಕೀಲ ನಾಗರಾಜ್‌, ನಾಗೇಂದ್ರ ಕೊಳ್ಳೂರು, ಚಿರುವನಹಳ್ಳಿ ಲಕ್ಷ್ಮಣಗೌಡ, ರಾಜ್ಯ ಪರಿಷತ್‌ನ ಜಯರಾಮರೆಡ್ಡಿ, ಪದ್ಮನಾಭ, ಯುವ ಮೋರ್ಚಾ ಅಧ್ಯಕ್ಷ ರಾಮಾಂಜಿ, ಎಸ್‌.ಸಿ ಮೋರ್ಚಾ ಶ್ರೀನಿವಾಸ್‌ ಹಾಗೂ ಮುಂತಾದವರು ಭಾಗವಹಿಸದ್ದರು.

Advertisement

Udayavani is now on Telegram. Click here to join our channel and stay updated with the latest news.

Next