Advertisement
ಫೆ.27 ರಂದು ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬೃಹತ್ ಕಿಸಾನ್ ರ್ಯಾಲಿ ಹಾಗೂ ಓಬಿಸಿ ಮೋರ್ಚಾ ವತಿಯಿಂದ 8 ರಾಜ್ಯಮಟ್ಟದ ರ್ಯಾಲಿ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಕೋಲಿ, ಕ್ಷತ್ರೀಯ, ಮರಾಠ, ಗೊಲ್ಲ, ನಾಯಕ ಸೇರಿ ಹಿಂದುಳಿದ ವರ್ಗಗಳ ಸಮುದಾಯದ ರ್ಯಾಲಿಗೆ ಸಿದ್ಧತೆ ಮಾಡಿಕೊಳ್ಳಿ. ಎಸ್‌ಸಿ, ಎಸ್‌ಟಿ ಸಮುದಾಯದ 5 ರ್ಯಾಲಿ, ಸ್ಲಂ ಮೋರ್ಚಾದಿಂದ 1 ರ್ಯಾಲಿ, ಮಹಿಳಾ ಮೋರ್ಚಾದಿಂದ 4 ರ್ಯಾಲಿ ಮಾಡಬೇಕೆಂದು ತಿಳಿಸಲಾಗಿದೆ. ಫೆ.4ರ ಬಳಿಕ ಮಾರ್ಚ್ 15 ರೊಳಗೆ ಒಟ್ಟು 19 ರ್ಯಾಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದರೆ, ಒಕ್ಕಲಿಗ, ಲಿಂಗಾಯತ, ಕುರುಬ ಸಮುದಾಯದ ಸಮಾವೇಶ ನಡೆಸದೇ ಇರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.