Advertisement

ISKCON: ಗೋರಕ್ಷಣೆ ಹೆಸರಲ್ಲಿ ಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರುತ್ತಿದೆ… ಮನೇಕಾ ಗಾಂಧಿ

10:29 AM Sep 27, 2023 | Team Udayavani |

ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದೆ ಮೇನಕಾ ಗಾಂಧಿ ಅವರು ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) “ದೇಶದ ಅತಿದೊಡ್ಡ ಮೋಸಗಾರ ಎಂದು ದೂರಿದ್ದು ಇಸ್ಕಾನ್ ತಮ್ಮ ಗೋಶಾಲೆಗಳಿಂದ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತದೆ” ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಹೌದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು ಗೋಶಾಲೆಗಳಲ್ಲಿರುವ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪ ಮಾಡಿದ್ದು ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆ ಇದೆಲ್ಲಾ ಸುಳ್ಳು ನಾವು ಯಾವ ಕಟುಕರಿಗೂ ಗೋವುಗಳನ್ನು ಮಾರಾಟ ಮಾಡುವುದಿಲ್ಲ ನಾವು ಗೋವುಗಳನ್ನು ರಕ್ಷಣೆ ಮಾಡುವವರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಸದ್ಯ ಸಂಸದೆ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗೋವುಗಳ ರಕ್ಷಣೆ ಹೆಸರಲ್ಲಿ ಗೋಶಾಲೆಗಳನ್ನು ನಿರ್ಮಿಸಿ, ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲಗಳನ್ನು ಪಡೆಯುವ ಇಸ್ಕಾನ್‌ ಸಂಸ್ಥೆಯು ಗೋವುಗಳನ್ನು ರಕ್ಷಿಸುವ ಹೆಸರಿನಲ್ಲಿ ಕಟುಕರಿಗೆ ಮಾರಾಟ ಮಾಡುತ್ತಿದೆ ಅಲ್ಲದೆ “ನಾನು ಇತ್ತೀಚೆಗೆ ಇಸ್ಕಾನ್ ಸಂಸ್ಥೆಯ ಅಧೀನದಲ್ಲಿ ಬರುವ ಅನಂತಪುರ ಗೌಶಾಲಾಗೆ (ಆಂಧ್ರಪ್ರದೇಶದ) ಭೇಟಿ ನೀಡಿದ್ದೇನೆ ಈ ವೇಳೆ ಅಲ್ಲಿರುವ ಒಂದೇ ಒಂದು ಹಸುಗಳು ಸಹ ಸುಸ್ಥಿತಿಯಲ್ಲಿ ಕಂಡುಬಂದಿಲ್ಲ” ಜೊತೆಗೆ ಗೋಶಾಲೆಯಲ್ಲಿ ಹಸುಗಳ ಸಂಖ್ಯೆಯೂ ಕಡಿಮೆಯಾಗಿತ್ತು ಇದರ ಅರ್ಥ ಇದ್ದ ಗೋವುಗಳನ್ನು ಮಾರಾಟ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ದೂರಿದ್ದಾರೆ.

Advertisement

ಇಸ್ಕಾನ್ ಹೇಳೋದೇನು?
ಸಂಸದೆ ಇಸ್ಕಾನ್ ವಿರುದ್ಧ ಆರೋಪ ಮಾಡಿರುವ ವಿಚಾರಕ್ಕೆ ಇಸ್ಕಾನ್ ಪ್ರತಿಕ್ರಿಯಿಸಿದ್ದು ಸಂಸದೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ನಾವು ಗೋಮಾಂಸವೇ ಪ್ರಧಾನ ಆಹಾರವಾಗಿರುವ ವಿಶ್ವದ ಹಲವು ಭಾಗಗಳಲ್ಲಿ ಇಸ್ಕಾನ್ ಗೋಸಂರಕ್ಷಣೆಯನ್ನು ಮಾಡುತ್ತಿದೆ ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಇಸ್ಕಾನ್ ಗೋಶಾಲೆಯಲ್ಲಿ ಹಲವು ಹಸುಗಳಿದ್ದು ಅವುಗಳಲ್ಲಿ ಕೆಲವೊಂದು ಹಸುಗಳು ವಧೆಗೆ ಸಾಗಿಸುತ್ತಿದ್ದ ಹಸುಗಳು ಅವುಗಳನ್ನು ರಕ್ಷಣೆ ಮಾಡಿ ನಮ್ಮ ಗೋಶಾಲೆಯಲ್ಲಿ ಚಿಕಿತ್ಸೆ ನೀಡಿ ರಕ್ಷಣೆ ಮಾಡುತ್ತಿದ್ದೇವೆ ಅಂಥದರಲ್ಲಿ ನಾವು ಕಟುಕರಿಗೆ ಪಶುಗಳನ್ನು ಮಾರಾಟ ಮಾಡುವ ವಿಚಾರವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Asian Games: ಶೂಟರ್‌ಗಳ ಕಮಾಲ್; 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ

Advertisement

Udayavani is now on Telegram. Click here to join our channel and stay updated with the latest news.

Next