Advertisement

ಆಮ್ ಆದ್ಮಿ ಪಕ್ಷ “ಮುಸ್ಲಿಂ ಲೀಗ್”ಅಂತ ಹೆಸರು ಬದಲಾಯಿಸಿಕೊಳ್ಳಲಿ: ಕಪಿಲ್ ಮಿಶ್ರಾ

09:58 AM Feb 04, 2020 | Nagendra Trasi |

ನವದೆಹಲಿ: ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷದ ಮುಖಂಡ ಕಪಿಲ್ ಮಿಶ್ರಾ ಸೋಮವಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಮ್ಮದ್ ಅಲಿ ಜಿನ್ನಾ ರೀತಿ ರಾಜಕೀಯ ಮಾಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಹೆಸರನ್ನು ಮುಸ್ಲಿಂ ಲೀಗ್ ಎಂದು ಬದಲಾಯಿಸಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.

Advertisement

ಉಗ್ರರು ಎಂದು ಪರಿಗಣಿಸಲ್ಪಟ್ಟಿದ್ದ ಅಫ್ಜಲ್ ಗುರು, ಬುರ್ಹಾನ್ ವಾನಿ ಹಾಗೂ ಉಮರ್ ಖಾಲಿದ್ ಅವರ ಅಪ್ಪನೂ ಕೂಡಾ ಯೋಗಿ ಆದಿತ್ಯನಾಥ್ ಗೆ ಹೆದರಬೇಕು ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಗಲಭೆಕೋರರು ಮತ್ತು ಪ್ರತಿಭಟನಾಕಾರರ ವಿರುದ್ಧ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಯೋಗಿಜೀ ಅವರ ಕ್ರಮ ಈ ದೇಶದ ಜನರ ಕೈಗನ್ನಡಿಯಂತಿದೆ. ಆದರೆ ಕೇಜ್ರಿವಾಲ್ ಜಿನ್ನಾ ರೀತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಿಶ್ರಾ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next