Advertisement

ಬಿಜೆಪಿಯಿಂದ ಐಟಿ ಇಲಾಖೆಯ ದುರುಪಯೋಗ: ಐವನ್‌

12:40 PM Mar 01, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರವನ್ನು ಉರುಳಿಸಲು ಬಿಜೆಪಿಯವರು ಐಟಿ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು ದುರುಪಯೋಗಿಸಿಕೊಂಡು ನಿರಂತರ ಪಿತೂರಿ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಆರೋಪಿಸಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅವರ ತಂಡ ಕಾಂಗ್ರೆಸ್‌ ಸರಕಾರವನ್ನು ಉರುಳಿಸುವ ಉದ್ದೇಶದಿಂದಲೇ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ. ಅದಕ್ಕಾಗಿ ಐಟಿ ದಾಳಿ, ಡೈರಿ ವಿಚಾರಗಳನ್ನು ಪ್ರಸ್ತಾವಿಸುತ್ತಿದ್ದಾರೆ. ಮುಖ್ಯಮಂತ್ರಿಯವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಅವರ ಆರೋಪಗಳನ್ನು ಸಾಬೀತುಪಡಿಸುವ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.

2013ರಲ್ಲಿ ಆಡ್ವಾಣಿ ಅವರಿಗೆ ಲೆಹರ್‌ಸಿಂಗ್‌ ಬರೆದಿರುವ ಭ್ರಷ್ಟಾಚಾರ ಬಗೆಗಿನ ಪತ್ರ ನಕಲಿಯಾ ಎಂದು ಪ್ರಶ್ನಿಸಿದ ಅವರು, ಎರಡೂ ಪಕ್ಷಗಳ ಬಗೆಗಿನ ಸಿಡಿ ಪ್ರಕರಣ, ಗೋವಿಂದ ರಾಜು ಡೈರಿ, ಸಹರಾ ಡೈರಿ, ಲೆಹರ್‌ ಸಿಂಗ್‌ ಡೈರಿ ಸಹಿತ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮರ್ಪಕ ತನಿಖೆಯಾಗಲಿ. ಆಗ ಸತ್ಯ ಹೊರ ಬರುತ್ತದೆ ಎಂದು ಆಗ್ರಹಿಸಿದರು.

ಮಾಜಿ ಮೇಯರ್‌ ಅಶ್ರಫ್‌ ಕೆ., ಅಬ್ದುಲ್‌ ಅಝೀಜ್‌ ಕಾರ್ಪೊರೇಟರ್‌ಗಳಾದ ರಜನೀಶ್‌, ಅಬ್ದುಲ್‌ ಲತೀಫ್‌, ಪ್ರತಿಭಾ ಕುಳಾç, ನಝೀರ್‌ ಬಜಾಲ್‌, ನಾಗೇಂದ್ರಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next