Advertisement

ಬಿಜೆಪಿಯ ಬಂದ್‌ ಕರೆ ಸಂಪೂರ್ಣ ವಿಫಲ: ಐವನ್‌   

10:39 AM May 29, 2018 | Harsha Rao |

ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಬಂದ್‌ಗೆ ಕರೆ ನೀಡಿದ್ದು ಬಿಜೆಪಿಯ ಬ್ಲಾಕ್‌ವೆುಲ್‌ ತಂತ್ರವಾಗಿದೆ. ಆದರೆ ರೈತರು ಬೀದಿಗಿಳಿದಿಲ್ಲ. ಅವರು ಕುಮಾರಸ್ವಾಮಿಗೆ ಸಮಯ ನೀಡಲು ನಿರ್ಧರಿಸುವ ಮೂಲಕ ಬಂದ್‌ ಕರೆಯನ್ನು ಸಂಪೂರ್ಣ ವಿಫ‌ಲಗೊಳಿಸಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ವಂತ ಬಲದಲ್ಲಿ ಸರಕಾರ ರಚನೆ ಮಾಡಿದರೆ ಸಾಲ ಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದೆ. ಸಾಲ ಮನ್ನಾ ಮಾಡುವುದಿಲ್ಲ ಎಂದು ಅವರು ಈಗಲೂ ಹೇಳುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಇತರ ನಾಯಕರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಇದು ಜನತೆಗೆ, ರೈತರಿಗೂ ಅರ್ಥವಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉಂಟಾದ ಸೋಲಿನ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಯಾವ ಕಾರಣಗಳಿಗಾಗಿ ಕಾಂಗ್ರೆಸ್‌ಗೆ ಈ ಸೋಲು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕೋಮುಗಲಭೆಗೆ ಹೆಚ್ಚು ಪ್ರಚಾರವನ್ನು ಬಿಜೆಪಿ ನೀಡಿದ್ದೂ ಇದಕ್ಕೆ ಕಾರಣವಾಗಿದೆ ಎಂದರು. 

ಡಿ.ಕೆ. ಅಶೋಕ್‌, ಪುನೀತ್‌ ಶೆಟ್ಟಿ, ಸಿರಿಲ್‌ ಡಿ’ಸೋಜಾ, ಹಬೀಬ್‌ ಕಣ್ಣೂರು, ಜ್ಞಾನೇಶ್‌, ಮುದಸ್ಸಿರ್‌ ಕುದ್ರೋಳಿ, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next