Advertisement

ನಗರಸಭೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರುತ್ತೆ

12:39 PM Apr 06, 2021 | Team Udayavani |

ಚನ್ನಪಟ್ಟಣ: ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಉದ್ದೇಶಿಸಿದ್ದು, ಚುನಾವಣಾ ಉಸ್ತುವಾರಿಗಾಗಿ 11 ಜನರ ಕೋರ್‌ ಕಮಿಟಿ ರಚಿಸಲಾಗಿದೆ. ಇವರ ಮಾರ್ಗದರ್ಶನದಲ್ಲಿ ಚುನಾವಣಾ ಕಾರ್ಯತಂತ್ರಹೆಣೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

Advertisement

ಪಟ್ಟಣದ 5ನೇ ಅಡ್ಡರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ನಗರಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲುಕಾರ್ಯಕರ್ತರು ಶ್ರಮಿಸಬೇಕಿದೆ. ಚುನಾವಣಾ ಉಸ್ತುವಾರಿ, ಟಿಕೆಟ್‌ ಹಂಚಿಕೆ, ಪ್ರಚಾರ ಕಾರ್ಯಗಳಿಗೆ ನೆರವಾಗಲು 11 ಮಂದಿಯ ಕೋರ್‌ ಕಮಿಟಿರಚಿಸಲಾಗಿದ್ದು, ಇವರ ಮೇಲುಸ್ತುವಾರಿಯಲ್ಲಿ ಈ ಬಾರಿಯ ನಗರಸಭೆ ಚುನಾವಣೆಯನ್ನುಎದುರಿಸಲಾಗುವುದು. ಕಾರ್ಯಕರ್ತರು ಕೋರ್ ‌ಕಮಿಟಿಯ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಅಧಿಕಾರಕ್ಕೆ ತರಲು ಶ್ರಮಿಸಿ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿ ಇರುವುದರಿಂದ ನಗರಸಭೆಯಲ್ಲೂ ಬಿಜೆಪಿ ಅಧಿಕಾರ ಹಿಡಿದರೆ ನಗರದ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ. ಈನಿಟ್ಟಿನಲ್ಲಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ ನಡೆಸುವ ಮುಖಾಂತರ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕರ್ತರು ಶ್ರಮಿಸಲಿ: ತಾಲೂಕು ಮತ್ತು ನಗರದಅಭಿವೃದ್ಧಿಗೆ ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿದೆ. ಇಂದು ತಾಲೂಕು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೆ ಅದಕ್ಕೆ ಬಿಜೆಪಿ ಸರಕಾರದ ಕೊಡುಗೆ ಸಾಕಷ್ಟಿದೆ. ಅದನ್ನು ಜನರಿಗೆ ತಿಳಿಸುವ ಮುಖಾಂತರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕರ್ತರ ಹೊಣೆ: ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಯಾರನ್ನು ಅಭ್ಯರ್ಥಿಯಾಗಿಸುತ್ತದೋ ಅವರನ್ನು ಎಲ್ಲರೂ ಬೆಂಬಲಿಸಿ. ಪಕ್ಷ ಅಂತಿಮಗೊಳಿಸಿದ ಅಭ್ಯರ್ಥಿಗಳ ಪರ ಎಲ್ಲ ಕಾರ್ಯಕರ್ತರು ಒಗ್ಗೂಡಿ ಪ್ರಚಾರ ನಡೆಸಿ. ಪಕ್ಷ ಯಾವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು ಅವರನ್ನುಗೆಲ್ಲಿಸಿಕೊಂಡು ಬರುವ ಹೊಣೆ ಕಾರ್ಯಕರ್ತರದಾಗಿರುತ್ತದೆ. ಇದನ್ನು ಅರಿತು ಕಾರ್ಯಕರ್ತರು ಒಗ್ಗಟಿನಿಂದ ಪ್ರಚಾರ ನಡೆಸಿ ಎಂದು ತಿಳಿಸಿದರು.

Advertisement

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಉಪಾಧ್ಯಕ್ಷರಾದ ಎಲೇಕೇರಿರವೀಶ್‌, ಚನ್ನಪಟ್ಟಣ ಯೋಜನಾ ಪ್ರಾಧಿಕಾರದಅಧ್ಯಕ್ಷ ಮಲವೇಗೌಡ, ನಗರ ಬಿಜೆಪಿ ಅಧ್ಯಕ್ಷಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಲಿಂಗೇಗೌಡ,ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆನಂದ ಸ್ವಾಮಿ,ನಗರಸಭೆ ಮಾಜಿ ಸದಸ್ಯರಾದ ಕೃಷ್ಣಪ್ಪ, ಕಮಲಾರಾಮು, ಮುಖಂಡರಾದ ಐರೀಶ್‌ ಬಾಬು,ಕೋಟೆ ಚಂದ್ರು, ಕುಳ್ಳಪ್ಪ, ಸಿ.ವಿ.ರಾಮು,ಯುವಮೋರ್ಚಾ ಅಧ್ಯಕ್ಷ ಚೇತನ್‌, ವಕ್ತಾರ ಗೋಪಿಕೃಷ್ಣ, ಸಂತೋಷ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next