Advertisement

ಭಟ್ಕಳ: ಹೆದ್ದಾರಿ ಸರ್ಕಲ್‌ ನ್ನು ತಿರಂಗಾ ವೃತ್ತವೆಂದು ನಾಮಕಾರಣ ಮಾಡಿ; ಬಿಜೆಪಿ ಯುವಮೋರ್ಚಾ

05:35 PM Jun 07, 2022 | Team Udayavani |

ಭಟ್ಕಳ: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಈಗಿರುವ ಸರ್ಕಲ್‍ನ್ನು ದೊಡ್ಡ ಸರ್ಕಲ್‍ನ್ನಾಗಿ ಮಾಡಿ ಆ ವೃತ್ತಕ್ಕೆ ದೇಶಾಭಿಮಾನ ಮತ್ತು ದೇಶದ ಧ್ವಜಕ್ಕೆ ಗೌರವ ಸಲ್ಲಿಸುವ  ಉದ್ದೇಶದಿಂದ ತಿರಂಗಾ ವೃತ್ತ (ಸರ್ಕಲ್) ಎಂದು ನಾಮಕಾರಣ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾದ ವತಿಯಿಂದ ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿಯಲ್ಲಿ ಪಟ್ಟಣ ಭಾಗದಲ್ಲಿ ಚತುಸ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈಗಿರುವ ಭಟ್ಕಳ ವೃತ್ತ ಅಗಲೀಕರಣವಾಗುತ್ತಿದ್ದು ಇದೇ ಸ್ಥಳದಲ್ಲಿ ಭಟ್ಕಳದ ಪ್ರತಿಷ್ಠೆ ಮತ್ತು ಗೌರವದ ಸಂಕೇತವಾಗಿ ಪುನ: ಬೃಹತ್ ಸರ್ಕಲ್ ನಿರ್ಮಿಸಿ, ಹೊಸದಾಗಿ ನಿರ್ಮಾಣವಾಗುವ ಸರ್ಕಲ್‍ಗೆ ತಿರಂಗಾ ಸರ್ಕಲ್ ಎಂದು ನಾಮಕರಣ ಮಾಡಲು ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ, ಐಆರ್  ಬಿ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ಮನವಿ ಸ್ವೀಕರಿಸಿದ ಶಾಸಕ ಸುನೀಲ ನಾಯ್ಕ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯುವಮೋರ್ಚಾದಿಂದ ಮನವಿಯನ್ನು ಸಂಸದ ಅನಂತಕುಮಾರ ಹೆಗಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೂ ನೀಡಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಯುವಮೋರ್ಚ ಅಧ್ಯಕ್ಷ  ಮಹೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಉದಯ ದೇವಾಡಿಗ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ನಾಯ್ಕ, ರಾಘವೇಂದ್ರ ನಾಯ್ಕ, ಕಿರಣ ನಾಯ್ಕ, ಉಪಾಧ್ಯಕ್ಷ ಚಂದ್ರು ನಾಯ್ಕ, ಹೇಮಂತ್ ನಾಯ್ಕ್, ಸದಸ್ಯರಾದ ವೆಂಕಟೇಶ ನಾಯ್ಕ್, ಉಮೇಶ ನಾಯ್ಕ, ವಿನೋದ ದೇವಾಡಿಗ, ದುರ್ಗೇಶ ನಾಯ್ಕ, ಯಶವಂತ ನಾಯ್ಕ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next