ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪದಗ್ರಹಣ ಮಾಡಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ “ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ಮುಂಭಾಗ ನಡೆಯಿತು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಯುವಜನರಿಗೆ ಈ ವೇಳೆ ಮಾಹಿತಿ ನೀಡಲಾಯಿತು. ಕೇಂದ್ರ ಸರಕಾರ ಮತ್ತು ಅದರ ಕಾರ್ಯವೈಖರಿ ಬಗ್ಗೆ ಜನರ ಆಕಾಂಕ್ಷೆಗಳ ಕುರಿತು ಚರ್ಚಿಸಲಾಯಿತು.
ಯುವ ಮೋರ್ಚಾದ ಜಿಲ್ಲಾಧಿಧ್ಯಕ್ಷ ಹರೀಶ್ ಪೂಂಜಾ ಮಾತನಾಡಿ, ಮೋದಿ ಸರಕಾರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂದರು.
ಪ್ರಗತಿಪಥದಲ್ಲಿ ದೇಶ
ದೀನ್ ದಯಾಳ್ ಅಂತ್ಯೋದಯ ಯೋಜನೆ, ಸ್ವತ್ಛ ಭಾರತ್, ಜನ್‌ಧನ್, ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಮುದ್ರಾ ಮುಂತಾದ ಹಲವು ಯೋಜನೆಗಳ ಮೂಲಕ ಕೇಂದ್ರ ಸರಕಾರ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಜಿಲ್ಲಾ ಯುವ ಮೋರ್ಚಾ ಉಪಾಧಿಧ್ಯಕ್ಷ ಸಂದೀಪ ಶೆಟ್ಟಿ ಮರವೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಹರೀಶ್ ಶೆಟ್ಟಿ ಶಿಲ್ಪಾ, ಮಂಗಳೂರು ನಗರ ದಕ್ಷಿಣ ಯುವ ಮೋರ್ಚಾ ಉಪಾಧ್ಯಕ್ಷ ಮಧು ಶೆಟ್ಟಿ, ಚರಿತ್ ಪೂಜಾರಿ, ಅವಿನಾಶ್ ಸುವರ್ಣ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿಗಳಾದ ಪ್ರಕಾಶ್ ಗರೋಡಿ, ಮೋಹಿತ್ ಶೆಟ್ಟಿ, ಶ್ಯಾಮ್, ಉದಯ ಅಮೀನ್, ಮಂಜು, ರಕ್ಷಿತ್ ಶೆಟ್ಟಿ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.