Advertisement

ಕಾರ್ಯಕರ್ತನಿಂದ ಬಿಜೆಪಿ ಸಂಸದನ ಪಾದಪೂಜೆ; ತಪ್ಪೇನು ಎಂದ ಸಂಸದ

11:10 AM Sep 17, 2018 | Team Udayavani |

ಗೊಡ್ಡ, ಜಾರ್ಖಂಡ್‌ : ನಿನ್ನೆ ಭಾನುವಾರ ಇಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತರೊರ್ವರು ಪಕ್ಷದ ಗೊಡ್ಡ ಕ್ಷೇತ್ರದ ಸಂಸದ ನಿಶಿಕಾಂತ್‌ ದುಬೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಸೇವಿಸಿದ ಘಟನೆ ನಡೆದಿದೆ. 

Advertisement

ಈ ಘಟನೆಯ ವಿವರವನ್ನು ಸಂಸದ ದುಬೆ ಅವರು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಹಾಕಿ, ತನ್ನ ಮಾತನ್ನು ಉಳಿಸಿಕೊಂಡ ಪಕ್ಷದ ಹಿರಿಯ ಕಾರ್ಯಕರ್ತ ಪವನ್‌ ಸಿಂಗ್‌ ಎಂಬವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

“ಇಂದು ಸಾವಿರಾರು ಜನರ ಸಮ್ಮುಖದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾಗಿರುವ ಪವನ್‌ ಸಿಂಗ್‌ ಅವರು ನನ್ನ ಪಾದ ತೊಳೆದು ಆ ನೀರನ್ನು ಸೇವಿಸಿದ್ದಾರೆ; ಇದರಿಂದಾಗಿ ನಾನು ಪಕ್ಷದ ಅತ್ಯಂತ ಸಣ್ಣ ಕಾರ್ಯಕರ್ತನೆಂಬ ಭಾವನೆ ನನ್ನಲ್ಲಿ ಮೂಡಿದೆ. ಈ ರೀತಿಯ ಅವಕಾಶ ನನಗೂ ಮುಂದೆ ಸಿಗಲಿ; ನಾನೂ  ಪಾದ ಪೂಜೆ ನಡೆಸಿ ಪೂಜಾ ಜಲ ಸೇವಿಸುವ ಅವಕಾಶ ನನಗೂ ಬರಲಿ ಎಂದು ಹಾರೈಸುತ್ತೇನೆ’ ಎಂದು ದುಬೆ ತಮ್ಮ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಹೇಳಿದ್ದಾರೆ. 

ಹಾಗಿದ್ದರೂ ಈ ಪಾದಪೂಜೆ ಮತ್ತು ನೀರು ಸೇವನೆಯ ಈ ಘಟನೆಯು ವ್ಯಾಪಕ ಟೀಕೆ, ವಿಮರ್ಶೆಗೆ ಗುರಿಯಾಗಿದೆ. 

“ಇದರಲ್ಲಿ ತಪ್ಪೇನಿದೆ; ಯಾರಾದರೂ ನಿಮ್ಮ ಪಾದಪೂಜೆ ನಡೆಸಿ ನೀರು ಸೇವಿಸಲು ಬಯಸಿದರೆ ತಪ್ಪೇನೂ ಇಲ್ಲ. ಇದಕ್ಕೆ ಯಾಕೆ ರಾಜಕೀಯ ಬಣ್ಣ ಹಚ್ಚಬೇಕು; ನಿಮ್ಮ ಅತಿಥಿಗಳ ಪಾದಪೂಜೆಯನ್ನು ನೀವು ನಡೆಸಿದರೆ ಅದರಲ್ಲಿ ತಪ್ಪೇನಿದೆ ? ನೀವು ಬೇಕಿದ್ದರೆ ಮಹಾಭಾರತದಲ್ಲಿನ ಕಥೆಗಳನ್ನು ಓದಿ’ ಎಂದು ಬಿಜೆಪಿ ಸಂಸದ ದುಬೆ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಪಾದಪೂಜೆಯ ಮಹತ್ವದ ಬಗ್ಗೆ ಟೀಕಾಕಾರಲ್ಲಿ ಅಜ್ಞಾನ ಇದೆ ಎಂದು ದುಬೆ ಅವರಿಗೆ ತಿರುಗೇಟು ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next