Advertisement
ನಳಿನ್ ಇಷ್ಟು ಅಂತರದ ಜಯ ಗಳಿಸಬಹುದು ಎಂಬುದನ್ನು ಬಿಜೆಪಿಯೇ ನಿರೀಕ್ಷಿಸಿರಲಿಲ್ಲ. ಅದು 2 ಲಕ್ಷದೊಳಗೆ ಇರಬಹುದು ಎಂಬುದು ಪಕ್ಷದ ಆಂತರಿಕ ಸಮೀಕ್ಷೆಯಾಗಿತ್ತು. ಬಿಜೆಪಿ ನಾಯಕರು ಪ್ರಚಾರ ಸಭೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಈ ಬಾರಿ ನಳಿನ್ ಸುಮಾರು 2 ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂದು ಹೇಳು ತ್ತಿದ್ದರೂ ಆಂತರಿಕ ವಲಯದಲ್ಲಿ ಒಂದರಿಂದ ಒಂದೂವರೆ ಲಕ್ಷ ಮತಗಳ ಒಳಗಿರಬಹುದು ಎನ್ನುವ ಅಭಿಪ್ರಾಯವಿತ್ತು.
Related Articles
ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರಗಳನ್ನು ರೂಪಿಸಿದ್ದ ಕಾಂಗ್ರೆಸ್‌ಗೆ ಫಲಿತಾಂಶ ಆಘಾತ ತಂದಿದೆ. ಬಿಜೆಪಿಗೆ ಮುನ್ನಡೆ ಒದಗಿಸುತ್ತಿರುವ ಪುತ್ತೂರು, ಸುಳ್ಯಗಳನ್ನು ಅದು ಹೆಚ್ಚು ಕೇಂದ್ರೀಕರಿಸಿತ್ತು. ಒಕ್ಕಲಿಗ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಡಿಕೆಶಿ ಮತ್ತು ಸಿಎಂಕುಮಾರಸ್ವಾಮಿ ಅವರನ್ನು ಕರೆಸಿತ್ತು.
Advertisement
ಬಿಜೆಪಿ ಅಭ್ಯರ್ಥಿ ವಿರುದ್ಧ ವ್ಯಕ್ತವಾಗುತ್ತಿದ್ದ ಅಸಮಾಧಾನ ತನ್ನ ಮತಗಳಾಗಿ ಪರಿವರ್ತನೆಯಾಗು ತ್ತವೆ ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿತ್ತು. ಸುಳ್ಯ, ಪುತ್ತೂರು ಭಾಗಗಳಲ್ಲಿ ಹೆಚ್ಚಿನ ಮತ ಗಳಿಸಿ ಬಿಜೆಪಿ ಲೀಡ್ ಕಡಿಮೆ ಮಾಡುವುದು ಮತ್ತು ಮಂಗಳೂರು, ಮಂ. ದಕ್ಷಿಣ ಮತ್ತು ಉತ್ತರಗಳಲ್ಲಿ ಇದನ್ನು ಸರಿದೂಗಿಸಿ ಮುನ್ನಡೆಯುವುದು ಅದರ ತಂತ್ರವಾಗಿತ್ತು. ಆದರೆ ಸುಳ್ಯ,ಪುತ್ತೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಗಣನೀಯವಾಗಿ ವೃದ್ಧಿಸುವುದರ ಜತೆಗೆ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ನಿರೀಕ್ಷಿತ ಮತ ಬಂದಿಲ್ಲ. ಹೆಚ್ಚು ನಿರೀಕ್ಷೆ ಇದ್ದ ಮಂಗಳೂರು ಕ್ಷೇತ್ರದಲ್ಲೂ ಮುನ್ನಡೆಯಲ್ಲಿ ಇಳಿಕೆ ಆಗಿದೆ.