Advertisement
ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ನಂತರ ಸಿಮೆಂಟ್ ಅಂಗಡಿ ತೆರೆಯುವ ಮುಖಾಂತರ ಉದ್ಯಮಿಯಾಗಿ ಬೆಳೆದು ನಂತರ ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2016ರಲ್ಲಿ ಕ್ಯಾಮನಹಳ್ಳಿ ತಾ.ಪಂ ಕ್ಷೇತ್ರದಿಂದ ತಾ.ಪಂ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಘೋಷಣೆ ಮಾಡಿದಾಗ ಬಹುತೇಕರು ಮೂಗು ಮುರಿದವರೆ ಹೆಚ್ಚು, ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಉದ್ಯಮಿ ನಾರ್ವೆ ಸೋಮಶೇಖರ್ ಕ್ಷೇತ್ರದೆಲ್ಲೆಡೆ ಬಳ್ಳಾರಿ ಶೈಲಿಯ ರಾಜಕಾರಣ ಮಾಡಿ ಬಿಜೆಪಿ ಹವಾ ಎಬ್ಬಿಸಿದ್ದರು ಸಹ ಅಂತಿಮ ಕ್ಷಣದಲ್ಲಿ ಮೈಮರೆತಿದ್ದರಿಂದ ಪರಾಜಿತಗೊಂಡಿದ್ದರು. ಆದರೆ ಇದಾದ ನಂತರ ಕ್ಷೇತ್ರದಲ್ಲಿ ಅವರು ಅಷ್ಟಾಗಿ ಸುಳಿಯದಿದ್ದ ಹಿನ್ನೆಲೆಯಲ್ಲಿ ಕೋವಿಡ್ ಲಾಕ್ ಡೌನ್ ಸಂರ್ಧಭದಲ್ಲಿ ನಿರಂತರವಾಗಿ ಜನರಿಗೆ ಸೇವೆ ಸಲ್ಲಿಸಿದಲ್ಲದೆ ಹಾಸನದ ಮಾಜಿ ಶಾಸಕ ಪ್ರೀತಮ್ ಗೌಡರವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಸಮಾಜಸೇವೆ ಹಾಗೂ ಪಕ್ಷ ಸಂಘಟನೆ ಮಾಡಿದರು.
Related Articles
Advertisement
ಕೈ ಹಿಡಿದ ಕಟ್ಟಾಯ: ಕಳೆದ ಬಾರಿಗಿಂತ ಈ ಬಾರಿ ಕಟ್ಟಾಯ ಭಾಗದಲ್ಲಿ ಬಿಜೆಪಿಗೆ ಅಧಿಕ ಮತಗಳು ಬಂದಿದ್ದರಿಂದ ಬಿಜೆಪಿಗೆ ಗೆಲುವು ಸಾಧಿಸಲು ಸಾಧ್ಯವಾಯಿತು.
ಜೆಡಿಎಸ್ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ: ಸಾಮಾನ್ಯ ಕಾರ್ಯಕರ್ತ ಸಿಮೆಂಟ್ ಮಂಜು ವಿರುದ್ದ ನಮಗೆ 30,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿವುದು ಖಚಿತ ಹಾಗೂ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ ಜೆಡಿಎಸ್ ಸೇರ್ಪಡೆಯಾಗಿದ್ದರಿಂದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವು ಖಚಿತ ಎಂದು ಮೈಮರೆತಿದ್ದು ಆದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಪ್ರತಿ ದಿನ ಪ್ರಚಾರ ಮಾಡಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸುವ ಮುಖಾಂತರ ಬದಲಾವಣೆಗೆ ಒಂದು ಅವಕಾಶ ಕೊಡಿ ಎಂದು ಪ್ರಚಾರ ನಡೆಸಿದ್ದಲ್ಲದೆ, ಅಂತಿಮ ಕ್ಷಣದಲ್ಲಿ ಮೈಮರೆಯದೆ ಸಂಪನ್ಮೂಲ ವ್ಯಯ ಮಾಡಿದ್ದು ಬಿಜೆಪಿಗೆ ಗೆಲುವಿಗೆ ಸಹಾಯಕಾರಿಯಾಯಿತು.
ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ಅನುಕೂಲ: ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ನೋಟಾದಿಂದ ಸುಮಾರು 6500 ಮತಗಳನ್ನು ಪಡೆದಿದ್ದು ಮತ್ತು ಕಾಂಗ್ರೆಸ್ ಅಭ್ಯರ್ಥಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದು ಬಿಜೆಪಿ ಗೆಲುವಿಗೆ ಸಹಾಯಕಾರಿಯಾಯಿತು.
ಸೋತ ಗುರು ಗೆಲುವು ಸಾಧಿಸಿದ ಶಿಷ್ಯ: ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಮ್ ಗೌಡ ಚುನಾವಣೆಯಲ್ಲಿ ಪರಾಜಿತರಾದರೆ ಅವರ ಶಿಷ್ಯ ಸಿಮೆಂಟ್ ಮಂಜು ಗೆಲುವು ಸಾಧಿಸಿದ್ದಾರೆ. ಇದರಿಂದ ಸಿಮೆಂಟ್ ಮಂಜು ಗೆಲುವು ಸಾಧಿಸಿದರು ಸಂಭ್ರಮಾಚರಣೆ ಮಾಡದ ಪರಿಸ್ಥಿತಿಯಲ್ಲಿದ್ದು ಗೆಲುವು ಸಾಧಿಸಿದ ತಕ್ಷಣ ಪ್ರೀತಮ್ ಗೌಡರ ಮನೆಗೆ ಹೋಗಿ ಅವರ ಆರ್ಶೀವಾದ ಪಡೆದು ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಒಟ್ಟಾರೆಯಾಗಿ ಜೆಡಿಎಸ್ ಭದ್ರಕೋಟೆಯಾಗಿದ್ದ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 19 ವರ್ಷಗಳ ನಂತರ ಕಮಲ ಅರಳಿದ್ದು ಇದರಿಂದ ಕಾರ್ಯಕರ್ತರು ಸಂಭ್ರಮಚರಣೆ ಮಾಡುತ್ತಿದ್ದಾರೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸಿಮೆಂಟ್ ಮಂಜು ರಾಜ್ಯದ ಘಟಾನುಘಟಿ ನಾಯಕರು ಪರಾಜಿತಗೊಂಡ ಸಂರ್ಧಭದಲ್ಲಿ ಗೆಲುವು ಸಾಧಿಸಿರುವುದು ಎದುರಾಳಿಗಳನ್ನು ಆಶ್ಚರ್ಯಕ್ಕೆ ಈಡು ಮಾಡಿದೆ. ಅದೃಷ್ಟ ದ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಸಿಮೆಂಟ್ ಮಂಜು ತೀವ್ರಾ ಹಣಾಹಣಿಯಲ್ಲಿ ಗೆಲುವು ಸಾಧಿಸಿದ್ದಾರೆ.
–ಸುಧೀರ್ ಎಸ್.ಎಲ್