ಮೂಡುಬಿದಿರೆ: ಇದೇ ಮೊದಲ ಬಾರಿಗೆ ಮೂಡುಬಿದಿರೆ ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಶಶಿಧರ್ ಕೋಟ್ಯಾನ್ ಆಯ್ಕೆಯಾದರು.
23 ವಾರ್ಡ್ ಗಳಲ್ಲಿ 11 ಕಾಂಗ್ರೆಸ್ ಹಾಗೂ 12 ಬಿಜೆಪಿ ಪಾಲಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್ ಅವರು ಉಪಸ್ಥಿತರಿದ್ದರಿಂದ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಅವರಿಗೆ ತಲಾ 13 ಮತಗಳು ಲಭಿಸಿವೆ.
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಿ.ಕೆ.ಥಾಮಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಮತಾ ಅವರು ತಲಾ 11ಮತಗಳು ಲಭಿಸಿವೆ.
ಇದನ್ನೂ ಓದಿ:ಕಾಪು ಪುರಸಭೆ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಚಾರದಲ್ಲಿ ಗೊಂದಲ: ಸದಸ್ಯರ ನಡುವೆ ವಾಗ್ವಾದ
ತಹಶಿಲ್ದಾರ್ ಗುರುಪ್ರಸಾದ್ ಚುನಾವಣಾಧಿಕಾರಿಯಾಗಿದ್ದರು. ಪುರಸಭಾ ಮುಖ್ಯ ಅಧಿಕಾರಿ ಇಂದೂ ಎಂ. ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಅಯ್ಕೆಯಾಗಿರುವ ಪ್ರಸಾದ್ ಕುಮಾರ್ ಸತತ ಮೂರನೇ ಬಾರಿಗೆ ಪುರಸಭಾ ಸದಸ್ಯರಾಗಿರುವ ಅನುಭವಿಯಾಗಿದ್ದರೆ, ಸುಜಾತಾ ಅವರು ಇದೇ ಮೊದಲ ಬಾರಿಗೆ ಪುರಸಭೆಗೆ ಪ್ರವೇಶಿಸಿದ್ದರು.