ಮಂಡ್ಯ: ಕುತೂಹಲ ಮೂಡಿಸಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ನಾಮನಿರ್ದೇಶಕರಾಗಿ ಆಯ್ಕೆಯಾಗಿದ್ದ ಸಿ.ಪಿ.ಉಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ನ ಕೆ.ಆರ್.ಪೇಟೆ ಅಶೋಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ.
ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ನ ಅಮರಾವತಿ ಅಶ್ವಥ್ ಜೆಡಿಎಸ್ ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ತಪ್ಪಿದೆ.
ಇದನ್ನೂ ಓದಿ:ಒಂದು ಬೇಕು ಮತ್ತೊಂದು ಬೇಡ ಅಂದ್ರೆ ಹೇಗೆ, ಬೇರೆ ಜಾತಿಯ ನಿಗಮ ಕೂಡಾ ಬೇಡ ಎನ್ನಲಿ: ಸಿಟಿ ರವಿ
ಕಾಂಗ್ರೆಸ್ ನ ನಾಗಮಂಗಲದ ನಿರ್ದೇಶಕ ನರಸಿಂಹಯ್ಯ ಅವರ ನಿರ್ದೇಶಕ ಸ್ಥಾನ ಅನರ್ಹಗೊಳಿಸಿದ ಸಹಕಾರ ಇಲಾಖೆಯ ಮೈಸೂರು ಜಂಟಿ ನಿರ್ದೇಶಕರು ಆದೇಶದಿಂದ ಕಾಂಗ್ರೆಸ್ ಬಲ 6ಕ್ಕೆ ಇಳಿದಿದೆ.
ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿಗೂ ಮುಖಭಂಗವಾಗಿದೆ. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಬಹುಮತವಿಲ್ಲದೆ ವಿಫಲವಾಗಿದೆ.