Advertisement

ಮಣಿಪುರದಲ್ಲಿ ಬಹುಮತ ಗೆದ್ದ ಬಿಜೆಪಿ ಸರಕಾರ

03:50 AM Mar 21, 2017 | |

ಇಂಫಾ: ಪಂಚರಾಜ್ಯ ಚುನಾವಣೆಯಲ್ಲಿ ಮಣಿಪುರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರ ಲಾಭ ಪಡೆದುಕೊಂಡು ಸರಕಾರ ರಚಿಸಿದ ಬಿಜೆಪಿ, ಸೋಮವಾರ ಧ್ವನಿಮತದ ಮೂಲಕ ಬಹುಮತ ಸಾಬೀತುಪಡಿಸಿತು. 

Advertisement

ಸಿಎಂ ಬಿರೇನ್‌ ಸಿಂಗ್‌ ಸರಕಾರಕ್ಕೆ ಟಿಎಂಸಿ ಶಾಸಕ ಬೆಂಬಲ ನೀಡಿದ್ದಾರೆ. 60 ಸದಸ್ಯರನ್ನು ಹೊಂದಿರುವ ವಿಧಾನಸಭೆಯಲ್ಲಿ 21 ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್)ನ ನಾಲ್ವರು ಶಾಸಕರು, ನ್ಯಾಷನಲ್‌ ಪೀಪಲ್ಸ್‌ ಪಕ್ಷ (ಎನ್‌ಪಿಪಿ)ದ ನಾಲ್ವರು ಶಾಸಕರು, ಲೋಕಜನಶಕ್ತಿ ಪಕ್ಷ ಮತ್ತು ಸ್ವತಂತ್ರ ಸದಸ್ಯ ಅಸಾಬ್‌ ಉದ್ದೀನ್‌ ಹಾಗೂ ಕಾಂಗ್ರೆಸ್‌ನ ಓರ್ವ ಸದಸ್ಯರು ಬಿರೇನ್‌ ಸಿಂಗ್‌ಗೆ ಬೆಂಬಲ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್‌ ಶಾಸಕ ಟಿ.ರೊಬಿಂದೊ ಸಿಂಗ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರಿಗೆ ಈ ಬಗ್ಗೆ  ಮಾಹಿತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಮಣಿಪುರದಲ್ಲಿನ ಆರ್ಥಿಕ ದಿಗ್ಬಂಧನ ರವಿವಾರ ತಡರಾತ್ರಿ ಮುಕ್ತಾಯವಾಗಿದ್ದು, ಯುನೈಟೆಡ್‌ ನಾಗಾ ಕೌನ್ಸಿಲ್‌ನ ಇಬ್ಬರು ಪ್ರಮುಖ ನಾಯಕರನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next