ಆಲಂಕಾರು : ಮೋದಿ ಸರಕಾರದ ಅಧಿಕಾರದ ಅವಧಿಯಲ್ಲಿ ದೇಶದ ಅಭಿವೃದ್ದಿಯನ್ನು ಮನಗಂಡು ಈ ಬಾರಿ
ಬಿಜೆಪಿಗೆ ಮತ ನೀಡಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿಗೆ ಗೆಲುವು ತಂದು ಕೊಡಲಿದೆ. ಪಕ್ಕಾ ಕಾಂಗ್ರೆಸ್ ಕಾರ್ಯಕರ್ತರೂ ಮೋದಿಯವರು ಮತ್ತೂಮ್ಮೆ ಅಧಿಕಾರಕ್ಕೇರಬೇಕೆನ್ನುವ ಆಶಯದೊಂದಿಗೆ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು ಶುಕ್ರವಾರ ಕೊçಲ ಗ್ರಾಮದ ಸಂಕೇಶ ತಿಮ್ಮಪ್ಪ ಗೌಡ ಹಾಗೂ ಬೇಂಗದಪಡು ಬಾಲಕೃಷ್ಣ ಗೌಡ ಅವರ ಮನೆಗೆ ತೆರಳಿ ಚುನಾವಣ ಪ್ರಚಾರ ಸಾಹಿತ್ಯ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ನಾನು ಕೆಲ ಕಾಂಗ್ರೆಸಿಗರಿಗೆ ದೂರವಾಣಿ ಕರೆ ಮಾಡಿದಾಗ, ನಾವು ಈ ಬಾರಿ ದೇಶಕ್ಕೋಸ್ಕರ ಮೋದಿಗಾಗಿ ಮತದಾನ
ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ನಮ್ಮ ಆತ್ಮ ವಿಶ್ವಾಸವನ್ನು ಇನ್ನೂ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ದೇಶ ಇಂದು ಸದೃಢವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ವಿಶ್ವಗುರುವಾಗುತ್ತಿದೆ ಎಂದರು.
ದುರುದ್ದೇಶದ ಆರೋಪ ನಮ್ಮ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವುದರೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಇವರ ವಿರುದ್ಧ ರಾಜಕೀಯ ದುರುದ್ದೇಶದಿಂದ
ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಹೊರತು ದಾಖಲೆಗಳಿಲ್ಲ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಂದೂವರೆ
ವರ್ಷದಲ್ಲಿ 38 ಕೋಟಿ ರೂಪಾಯಿ ಅನುದಾನ ನೀಡಿ ರಸ್ತೆಗಳ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಮೂಲ ಸೌಕರ್ಯ ಅಭಿವೃದ್ಧಿ ಬಲ್ಯ-ನೆಲ್ಯಾಡಿ, ಎಡಮಂಗಲ- ದೋಳ್ಪಾಡಿ-ಚಾರ್ವಾಕ, ಸುಳ್ಯ- ಉಬರಡ್ಕ, ಕಾಂತ ಮಂಗಳ-ಅಜ್ಜಾವರ, ಅಯ್ಯನ ಕಟ್ಟೆ-ಬೇಂಗಮಲೆ, ಎಲಿಮಲೆ- ಅರಂತೋಡು ಮೊದಲಾದ ರಸ್ತೆಗಳಿಗೆ ನಳಿನ್ ಕುಮಾರ್ ಅವರು, ಕೇಂದ್ರ ರಸ್ತೆ ನಿಧಿಯಿಂದ ಅನುದಾನ ಒದಗಿಸಿಕೊಟ್ಟು ಅಭಿವೃದ್ಧಿ ಮಾಡಿದ್ದಾರೆ. ಕೇಂದ್ರದ ಆದರ್ಶ ಗ್ರಾಮ ಯೋಜನೆಯಲ್ಲಿ ಕ್ಷೇತ್ರದ ಬಳ್ಪ ಗ್ರಾಮಕ್ಕೆ ಆಸ್ಪತ್ರೆ, ಬ್ಯಾಂಕ್, ಶಾಲೆ, ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಿದ್ದಾರೆ.
ಈ ಬಾರಿ ನಳಿನ್ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅಂಗಾರ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ನೆಲ್ಯಾಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಸುಳ್ಯ ಮಂಡಲ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ತಾ.ಪಂ. ಸದಸ್ಯೆ ಜಯಂತಿ ಆರ್ ಗೌಡ, ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ, ಆಲಂಕಾರು ಸಿಎ ಬ್ಯಾಂಕ್ ನಿರ್ದೆಶಕಿ ಮಮತಾ ಆನೆಗುಂಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ರಾಮ ನಾಯ್ಕ, ಕೊçಲ ಗ್ರಾ.ಪ. ಅಧ್ಯಕ್ಷೆ ಹೇಮಾ ಮೋಹನ್ ದಾಸ್ ಶೆಟ್ಟಿ, ಉಪಾಧ್ಯಕ್ಷೆ ವಿಜಯಶೇಖರ ಅಂಬಾ, ಸದಸ್ಯರಾದ ಸುಧೀಶ್ ಪಟ್ಟೆ,
ವಿನೋಧರ ಮಾಳ, ಸುಂದರ ನಾಯ್ಕ, ಬಿಜೆಪಿ ಮುಖಂಡರಾದ ಉಮೇಶ್ ಸಂಕೇಶ, ರಾಮಚಂದ್ರ ನಾಯ್ಕ,
ಸಭಾಸ್ ಶೆಟ್ಟಿ ಆರಾರ, ಶ್ರೀಶಕುಮಾರ್, ಶ್ರೀರಾಮ, ನಾಗೇಶ್ ಕಡೆಂಬ್ಯಾಲ್, ನೇತ್ರಾಕ್ಷ ನಾಯ್ಕ, ಪ್ರಕಾಶ್ ಕೆಮ್ಮಾರ, ಚಂದ್ರಹಾಸ ಪರಂಗಾಜೆ ಸುಂದರ ಓಕೆ ಮತ್ತಿತರರು ಉಪಸ್ಥಿತರಿದ್ದರು.
ಎ. 13: ಮೋದಿ ಮಂಗಳೂರಿಗೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಅಂಗಾರ, ಎ. 13ರಂದು ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.