Advertisement

ಬಿಜೆಪಿ ಗೆದ್ದ ಮೇಲೆ ಖೇಣಿ ಜೈಲಿಗೆ: ಕೆ.ಎಸ್‌. ಈಶ್ವರಪ್ಪ

07:30 AM Mar 07, 2018 | Team Udayavani |

ಬೀದರ: ಶಾಸಕ ಅಶೋಕ ಖೇಣಿ ಕಾಂಗ್ರೆಸ್‌ ಸೇರ್ಪಡೆಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಬಿಗಿದಪ್ಪಿಕೊಂಡಂತಾಗಿದೆ. ನೈಸ್‌ ಯೋಜನೆ ಅಕ್ರಮ ಕುರಿತ ವರದಿಯನ್ನು ಕಾಂಗ್ರೆಸ್‌ ಮುಚ್ಚಿಹಾಕಬಹುದು. ಆದರೆ, ಮುಂದೆ ಬಿಎಸ್‌ವೈ ನೇತೃತ್ವದಲ್ಲಿ ಅಧಿ ಕಾರಕ್ಕೆ ಬರಲಿರುವ ಬಿಜೆಪಿ, ಅಕ್ರಮ ಮಾಡಿದವರನ್ನು ಜೈಲಿಗಟ್ಟಲಿದೆ ಎಂದು ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೈಸ್‌ ಅಕ್ರಮದ ವಿರುದ್ಧ ಸದನದಲ್ಲಿ ಸಾಕಷ್ಟು ಚರ್ಚೆ ಆಗಿ ಕಾನೂನು ಸಚಿವ ಜಯಚಂದ್ರ ಅಧ್ಯಕ್ಷತೆಯ ಸಮಿತಿ ವರದಿ ನೀಡಿ, ನೈಸ್‌ ಯೋಜನೆಯಡಿ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ. ಇದು ಗೊತ್ತಿದ್ದೂ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ನೈಸ್‌ ಮುಖ್ಯಸ್ಥರಾಗಿರುವ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸರ್ಕಾರ ಭ್ರಷ್ಟಾಚಾರಕ್ಕೆ ನೇರ ಬೆಂಬಲ ಕೊಡುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಸಿದ್ದರಾಮಯ್ಯ ನಕಲಿ ಹಿಂದುಳಿದ ವರ್ಗದ ಸಿಎಂ ಮತ್ತು ರಾಮಲಿಂಗಾರೆಡ್ಡಿ ನಕಲಿ ಗೃಹ ಸಚಿವ. ಆರೆಸ್ಸೆಸ್‌ ಮಟ್ಟಹಾಕಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಅಪ್ಪ ನೆಹರು ಅವರಿಗೂ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಧ್ಯವೇ? ಕರ್ನಾಟಕ ಕೊಲೆಗಡುಕರ ಸ್ವರ್ಗ, ಗೂಂಡಾ ರಾಜ್ಯ ಆಗಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next